ಕಟೀಲು: ಕಟೀಲು ಬ್ರಹ್ಮ ಕಲಶೋತ್ಸವಕ್ಕೆ 25 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು ದ.ಕ ಜಿಲ್ಲಾಡಳಿತದಿಂದ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದ್ದು ಸಿದ್ದತೆ ಪೂರ್ಣಗೊಂಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಕಟೀಲು ವದೇವಳದಲ್ಲಿ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ಈ ಬಾರಿ ಭಕ್ತರನ್ನು ಆಕರ್ಷಿಸುವ ಕೆಲಸಕ್ಕೆ ಕೈ ಹಾಕಿದ್ದು
ದೇವಳದ ರಥಬೀದಿ ಮಾಡಲು ವ್ಯವಸ್ಥೆ, ಅಲ್ಲದೆ ದೇವಳದ ಸೌಂದರ್ಯ ವರ್ಧಿಸುವ ಕೆಲಸ ನಡೆದಿದೆ. ಸುಂದರೀಕರಣದ ಮೂಲಕ ದೇವಳದ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ದೇವಳದ ಮೂಲಭೂತ ವ್ಯವಸ್ಥೆಗಳನ್ನು ಖುದ್ದು ನಿಂತು ಸರಿ ಮಾಡಲಾಗಿದೆ. ಕಾನೂನು ಹಾಗೂ ಸ್ವಯಂ ಪ್ರೇರಿತರ ಸಹಕಾರದಿಂದ ದೇವಳದ ಅಭಿವೃದ್ಧಿ ಆಗುತ್ತಿರುವುದು ಸಂತೋಷ ತಂದಿದೆ ಎಂದರು. ಇಲ್ಲಿನ ಸ್ಥಳೀಯ ರಸ್ತೆ ಅನುದಾನಕ್ಕಾಗಿ 25 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರವಾಸಿ ಲಾಡ್ಜ್ ಮಾದರಿಯಲ್ಲಿ ಪ್ರವಾಸಿಗರಿಗೆ ಅನುಕೂಲ ಆಗುವ ರೀತಿಯಲ್ಲಿ ಹಾಗೂ ಮಿನರಲ್ ವಾಟರ್ ವ್ಯವಸ್ಥೆ ಮಾಡಲಾಗಿದೆ. ಕಟೀಲಿನಲ್ಲಿ ನಡೆಯುವ ಬ್ರಹ್ಮಕಲಶ ದ.ಕ. ಜಿಲ್ಲೆಯಲ್ಲಿ ಮಾದರಿಯಾಗಬೇಕೆನ್ನುವ ನಿಟ್ಟಿನಲ್ಲಿ ಶ್ರಮ ವಹಿಸಲಾಗಿದೆ ಎಂದರು. ಸುಧಾರಿತ ತಂತ್ರಜ್ಞಾನ ಮಾದರಿಯಲ್ಲಿ ಕಿಚನ್, 10,000 ಮಂದಿಗೆ ಊಟದ ವ್ಯವಸ್ಥೆ ಎಲ್ಲರಿಗೂ ಏಕಕಾಲದಲ್ಲಿ ಸಹಬೋಜನ ವ್ಯವಸ್ಥೆ ಮಾಡಲಾಗಿದೆ. 19 ಕಡೆ ಪಾರ್ಕಿಂಗ್ ಸುಸಜ್ಜಿತ ವ್ಯವಸ್ಥೆ, 6-7 ಕಡೆ ಪಾರ್ಕಿಂಗ್ ಕಲ್ಪಿಸಲಾಗಿದೆ. ಜಗತ್ತಿನ ಎಲ್ಲ ಕಡೆಯಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದರು. 7 ಕೋಟಿ ವೆಚ್ಚದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, 700 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾವಿದರು, 150 ಭಜನಾ ತಂಡ , ಚಂಡಿಕಾ ಯಾಗ 11 ಕುಂಡಗಳಲ್ಲಿ ನಡೆಯಲಿದೆ. ಅಲಂಕಾರ ಸಮಿತಿ ಧರ್ಮಸ್ಥಳ ಖಾವಂದರು ಅಲಂಕಾರಕ್ಕೆ ಅವರ ತಂಡ ಕಳುಹಿಸಿಕೊಟ್ಟಿದ್ದಾರೆ ಎಂದರು.

