ಕಟಪಾಡಿ: ಇತಿಹಾಸ ಪ್ರಸಿದ್ಧ ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳವು ಶನಿವಾರ ಕಟಪಾಡಿ ಬೀಡಿನ ಗದ್ದೆಯಲ್ಲಿ ನಡೆದಿದ್ದು, ಕಂಬಳ ಕೂಟದ ಫಲಿತಾಂಶ ಇಂತಿದೆ.

ಕನೆಹಲಗೆ ವಿಭಾಗದಲ್ಲಿ 9 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 4 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 16 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 32 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 23 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 93 ಜೊತೆ ಸೇರಿದಂತೆ ಒಟ್ಟು 177 ಜೊತೆ ಕೋಣಗಳು ಭಾಗವಹಿಸಿದ್ದವು.
ಅಡ್ಡ ಹಲಗೆ:
ಪ್ರಥಮ: ಕೋಟ ಕಾಸನಗುಂಡು ಗೋಪಾಲ್ ಮಡಿವಾಳ, (ಭಟ್ಕಳ ಹರೀಶ್),
ದ್ವಿತೀಯ: ಬೋಳಾರ ತ್ರಿಶಾಲ್ ಕೆ. ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ).
ಹಗ್ಗ ಹಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ “ಎ’ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ),
ದ್ವಿತೀಯ: ನಂದಳಿಕೆ ಶ್ರೀಕಾಂತ ಭಟ್ “ಎ’ (ಬಂಬ್ರಾಣಬೈಲು ವಂದಿತ್ ಶೆಟ್ಟಿ).
ಹಗ್ಗ ಕಿರಿಯ:
ಪ್ರಥಮ: 80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್),
ದ್ವಿತೀಯ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ. ಕೋಟ್ಯಾನ್ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ).
ನೇಗಿಲು ಹಿರಿಯ:
ಪ್ರಥಮ: ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ “ಎ’, (ನಕ್ರೆ ಪವನ್ ಮಡಿವಾಳ),
ದ್ವಿತೀಯ: ನಾವುಂದ ಆಶ್ರಿತ ಇಶಾನಿ ವಿಶ್ವನಾಥ ಪೂಜಾರಿ “ಎ’ (ಬೈಂದೂರು ಮಂಜುನಾಥ ಗೌಡ).
ನೇಗಿಲು ಕಿರಿಯ:
ಪ್ರಥಮ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ (ಆದಿ ಉಡುಪಿ ಜಿತೇಶ್),
ದ್ವಿತೀಯ: ಕಾಪು ಕಲ್ಯ ಜವನೆರ್ (ಕಕ್ಕೆಪದವು ಗೌತಮ್ ಗೌಡ).
ಕನೆಹಲಗೆಯಲ್ಲಿ ಸಮಾನ ಬಹುಮಾನ
ಬೋಳಾರ ತ್ರಿಶಾಲ್ ಕೆ. ಪೂಜಾರಿ, ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಬೊಳ್ಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ “ಎ’, ಬೊಳ್ಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ “ಬಿ’, ಬೊಳ್ಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ “ಸಿ’, ಬೊಳ್ಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ “ಡಿ’, ತೋನ್ಸೆ ಜಾಕ್ಯೂಮ್ ಲೂಯಿಸ್, ನೇರಳಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ, ಸಾಸ್ತಾನ ಪಾಂಡೇಶ್ವರ ಗಣೇಶ್ ಪೂಜಾರಿ ಸಮಾನ ಬಹುಮಾನ ವಿಜೇತರಾಗಿದ್ದಾರೆ.