ಕಲ್ಲಡ್ಕ : ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಭವಿಷ್ ಘಟಕ ಆಯೋಜಿತ ಪುನಶ್ಚೇತನ ಕಾರ್ಯಾಗಾರವು ಪದವಿ ವಿಭಾಗದಲ್ಲಿ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಗೋಪಾಲ ಶೆಣೈ ಕಂಟಿಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಸೇವಾ ಪ್ರಮುಖರು ಹಾಗೂ ನಿವೃತ್ತ ಶಿಕ್ಷಕರು ಆಗಿರುವಂತಹ ಸುಬ್ರಾಯ ನಂದೋಡಿ ಅವರು ಮತ್ತು ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ ಇವರು ಉಪಸ್ಥಿತರಿದ್ದರು.

ಒಟ್ಟು 3 ಅವಧಿಗಳ ಕಾರ್ಯಾಗಾರದಲ್ಲಿ ಮೊದಲ ಅವಧಿಯಲ್ಲಿ ಭಾಷಾ ಶುದ್ಧಿ ವಿಷಯದ ಕುರಿತು ಸುಬ್ರಾಯ ನಂದೋಡಿ ಅವರು ವಿಶೇಷ ಉಪನ್ಯಾಸ ನಡೆಸಿಕೊಟ್ಟರು .
ಎರಡನೇ ಅವಧಿಯಲ್ಲಿ ಅಧ್ಯಾಪನದಲ್ಲಿ ದಶ ಸೂತ್ರಗಳು ಎಂಬ ವಿಷಯದ ಕುರಿತು ವಿವೇಕಾನಂದ ಶಿಕ್ಷಕ – ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶೋಭಿತ ಸತೀಶ್ ಗುಂಪು ಚರ್ಚೆ ಮೂಲಕ ನಡೆಸಿಕೊಟ್ಟರು.ಮೂರನೇ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಪದವಿ ಉಪನ್ಯಾಸಕರಾದ ಅಖಿಲಾ ,ಸುಬ್ರಹ್ಮಣ್ಯ, ಸುಜಿತ್ ಶಕುಂತಲದೇವಿ ಲ್ಯಾಬ್ ನಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಒಟ್ಟು 36 ವಿದ್ಯಾರ್ಥಿಗಳು, 4 ಜನ ಉಪನ್ಯಾಸಕರು ಭಾಗವಹಿಸಿದರು.

