ವಿಟ್ಲ: ವಿಟ್ಲದ ವಿಠಲ ವಿದ್ಯಾ ಸಂಘದ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನೀರು, ಆಹಾರ ಮತ್ತು ಶಕ್ತಿಯ ಮಿತ ಬಳಕೆಯ ಬಗ್ಗೆ ಎನ್ನೆಕ್ಸ್ ಪ್ಲೋರರ್ ಪ್ರೋಗ್ರಾಂನಡಿ ನಾನಾ ಕಾರ್ಯ ಯೋಜನೆಗಳನ್ನು ಮಕ್ಕಳೇ ರೂಪಿಸುವಂತೆ ಅರಿವು ಮೂಡಿಸುವ ಎರಡು ದಿನಗಳ ಕಾರ್ಯಾಗಾರ ನಡೆಯಿತು.
ಲನರ್ಿಂಗ್ ಲಿಂಕ್ ಫೌಂಡೇಶನ್ನ ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ್ ಪಾಟಕ್ ಕಾರ್ಯಾಗಾರ ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರಾದ ರಾಜಶೇಖರ, ಧನಶ್ರೀ, ಇಂದುಮತಿ ಮತ್ತು ಮಕ್ಕಳು ಉಪಸ್ಥಿತರಿದ್ದರು.
