ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಟ್ಲ ಜೆಸಿಐ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಲಿಂಗ ಸಮಾನತೆ-ಮಹಿಳಾ ಸಬಲೀಕರಣ’ ಎಂಬ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಜೆಸಿಐ ಇಂಡಿಯಾದ ರಾಷ್ಟ್ರೀಯ ಪ್ರೊವಿಷನಲ್ ತರಬೇತುದಾರರಾದ ಸೌಜನ್ಯ ಹೆಗ್ಡೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉದ್ಘಾಟಿಸಿದರು. ಕನ್ನಡ ಉಪನ್ಯಾಸಕಿ ವಿಶ್ವಕುಮಾರಿ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೇಸಿಐ ಪೂರ್ವ ವಲಯಾಧಿಕಾರಿ ರಶೀದ್ ವಿಟ್ಲ ಮತ್ತು ಪೂರ್ವಾಧ್ಯಕ್ಷ ಜೈಕಿಶನ್ ಸಪ್ತಾಹದ ನಿರ್ಧೇಶಕ ಆರ್ತಿಕ್ ವೇದಿಕೆಯಲ್ಲಿದ್ದರು. ಜೆಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಿವಾನಿ ಬಿ. ಶೆಟ್ಟಿ ವಂದಿಸಿದರು.














