ಬಂಟ್ವಾಳ: ಶ್ರೀ.ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕು ಬಿ.ಸಿ.ಟ್ರಸ್ಟ್, ಜ್ಙಾನವಿಕಾಸ ಕೇಂದ್ರದ ಸೇವಾ ಪ್ರತಿನಿಧಿಗಳ ಕಾರ್ಯಾಗಾರವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜ್ಙಾನವಿಕಾಸ ಸೇವಾ ಪ್ರತಿನಿಧಿಗಳು ಉತ್ತಮರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಕೇಂದ್ರದ ಸದಸ್ಯರು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದರು. ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಗೆಳತಿ ವಿಭಾಗದ ಆಪ್ತಸಮಾಲೋಚಕಿ ಚೈತನ್ಯ ಜೈನ್ ‘ಗೆಳತಿ’ ಕಾರ್ಯಕ್ರಮದಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ವಿಚಾರದ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ.,25 ಜ್ಙಾನ ವಿಕಾಸನ ಕೇಂದ್ರದಸೇವಾ ಪ್ರತಿನಿಧಿಗಳು, ಜ್ಙಾನ ವಿಕಾಸನ ಸಮನ್ವಯಾಧಿಕಾರಿ ರತ್ನ ಉಪಸ್ಥಿತರಿದ್ದರು.ರತ್ನಾ ಸ್ವಾಗತಿಸಿ, ಕುಸುಮ ವಂದಿಸಿದರು. ಬೇಬಿ ಕಾರ್ಯಕ್ರಮ ನಿರೂಪಿಸಿದರು.
