ಬಂಟ್ವಾಳ: ರಾಷ್ಟ್ರೀಯ ಕಾರ್ಯಕ್ರಮ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯ ಬಗ್ಗೆ ತಾಲೂಕು ಪಂಚಾಯತ್ ವತಿಯಿಂದ
ಬಂಟ್ವಾಳ ತಾಲೂಕಿನ ಎಂ.ಬಿ.ಕೆ, ಬಿ.ಆರ್.ಪಿ, ಎಲ್.ಸಿ.ಆರ್.ಪಿ, ಎಂ.ಸಿ.ಆರ್.ಪಿ ಮತ್ತು ಪಂಚಾಯತ್ ಮಟ್ಟದ ಸ್ವಸಹಾಯ ಸಂಘಗಳ ಅಧ್ಯಕ್ಷ ರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಮಾಹಿತಿ ಕಾರ್ಯಗಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.



ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಎನ್.ಕೆ.ಆಲಿ.ಅವರ ಅಧ್ಯಕ್ಷ ತೆಯಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಅವರು
ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ದ ದೃಷ್ಟಿಯಿಂದ ಸರಕಾರ ಈ ಯೋಜನೆಯ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶ ಹೊಂದಿದೆ.
ಪ್ರತಿಯೊಬ್ಬ ಸದಸ್ಯರು ಈ ಯೋಜನೆಯ ಮಾಹಿತಿ ಪಡೆದುಕೊಂಡು ಸ್ವಾವಲಂಬಿ ಗಳಾಗಿ ಜೀವನ ನಡೆಸಲು ಮುಂದಾಹಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯ ಲೆಕ್ಕ ಪತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಝೀವಲ್ ಖಾನ್, ತಾ.ಪಂ.ಕಾರ್ಯನಿರ್ವಣಾಧಿಕಾರಿ ರಾಜಣ್ಣ, ತಾ.ಪಂ.ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ, ತಾಲೂಕು ಮೇಲ್ವಿಚಾರಕ ಕುಶಾಲಪ್ಪ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.