Friday, July 11, 2025

ಕರೋಪಾಡಿ ರಸ್ತೆ ಗಡಿ ಬಂದ್ ವಿವಾದ: ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ರಶ್ಮಿ ಎಸ್. ಆರ್

*ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣದಿಂದಾಗಿ ದ.ಕ.ಜಿಲ್ಲೆಯ ಜನತೆ ಒಂದು ರೀತಿಯಲ್ಲಿ ಭಯ ಉಂಟಾಗಿದೆ.
ಯಾವಾಗ ಗಡಿ ರಸ್ತೆ ಓಪನ್ ಮಾಡುತ್ತಾರೆ ಎಂಬ ಭಯ ಜನರಲ್ಲಿದೆ
ಗಡಿ ತೆರವು ಅಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರು ಹೇಳಿದ್ದಾರೆ.
ಅದರೂ ಕೇರಳದಿಂದ ದ.ಕ.ಜಿಲ್ಲೆ ಗೆ ಬರಲು ಹತ್ತಾರು ಮಾರ್ಗಗಳಿರುವುದೇ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ ವಿಟ್ಲ ಭಾಗದಲ್ಲಿ ಕೇರಳಕ್ಕೆ ಸಂಪರ್ಕ ರಸ್ತೆಗಳು ಹೆಚ್ಚಾಗಿರುವುದೇ ಜನರ ಆತಂಕಕ್ಕೆ ಕಾರವಾಗಿದೆ.
ಅಲ್ಲಿನ ಗಡಿ ರಸ್ತೆಗಳು ಸಂಪೂರ್ಣ ಬಂದ್ ಆದರೆ ಮಾತ್ರ ಜಿಲ್ಲೆ ಸೇಫ್ ಎಂದು ಹೇಳಲಾಗುತ್ತಿದ್ದು ಅದಕ್ಕಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.*

ಬಂಟ್ವಾಳ: ಕರೋಪಾಡಿ -ಕೇರಳ ಗಡಿ ರಸ್ತೆ ಬಂದ್ ವಿವಾದ ಬಗೆಹರಿಸಲು ಸ್ವತಃ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್. ಆರ್.ಅವರು ಇಂದು ಬೆಳಿಗ್ಗೆ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಅವರ ಜೊತೆ ಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಳಿಕ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಸೇರುವ ಗಡಿಯಲ್ಲಿ ರಸ್ತೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಸ್ತೆಯ ಗಡಿಯಲ್ಲಿ ವಿವಾದ ಉಂಟಾಗಿತ್ತು.
ವಿಟ್ಲ ಪೋಲೀಸರು ರಸ್ತೆ ಬಂದ್ ಮಾಡಿದ ಕೇರಳಕ್ಕೆ ಸೇರಿ ದ್ದು ಎಂದು ಅವರ ವಾದವಾಗಿತ್ತು.
ಆದರೆ ಈ ವಿವಾದನ್ನು ಬಗೆಹರಿಸಲು ಸ್ವತಃ ತಹಶೀಲ್ದಾರ್ ಅವರೇ ಮುತುವರ್ಜಿಯಿಂದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೆ ವಾಹನ ಬಿಡುವುದಿಲ್ಲ ಎಂದ ವಿಟ್ಲ ಎಸ್.ಐ.ವಿನೋದ್ ರೆಡ್ಡಿ.
ರಸ್ತೆ ಗಡಿ ವಿವಾದ ವನ್ನು ಕಾರಣವಾಗಿಟ್ಟು ಕೊಂಡು ಕೇರಳದಿಂದ ನುಸುಳುಕೋರರು ದ.ಕ.ಜಿಲ್ಲೆ ಗೆ ಅಗಮಿಸಲು ಕಣ್ಣ ಹಾಕುತ್ತಿದ್ದಾರೆ, ಆದರೆ ತಹಶೀಲ್ದಾರ್ ಅವರ ಸೂಚನೆಯಂತೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟವಾದ ಮಾತನಲ್ಲಿ ಎಸ್.ಐ.ಅವರು ತಿಳಿಸಿದ್ದಾರೆ.

ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪಿ.ಡಿ.ಒ.ಗಳ ಹಾಗೂ ಟಾಸ್ಕಪೋರ್ಸ್ ಸಮಿತಿ ಯ ಅಸಹಕಾರ:
ಕೊರೊನಾ ವೈರಸ್ ತಡೆಗೆ ತಾಲೂಕಿನ ಎಲ್ಲಾ ಅಧಿಕಾರಿಗಳು ಸಮರೋಪಾಧಿಯಲ್ಲಿ ಕರ್ತವ್ಯ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸೂಚನೆ ನೀಡಿದ್ದಾರೆ. ಆದರೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪಿ.ಡಿ.ಒ.ಗಳು ಹಾಗೂ ಟಾಸ್ಕಪೋರ್ಸ್ ಸಮಿತಿ ಯ ಅಧಿಕಾರಿ ವರ್ಗದವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೇರಳ ರಸ್ತೆ ಗಡಿ ಬಂದ್ ವಿಚಾರದಲ್ಲೂ ಕೂಡ ಪೋಲೀಸರು ಸ್ಥಳಕ್ಕೆ ಬಂದು ಕರ್ತವ್ಯ ಮಾಡುತ್ತಾರೆ ಅದರೆ ಅದಕ್ಕೆ ಸಂಬಂಧಿಸಿದ ಈ ಭಾಗದ ಅಧಿಕಾರಿ ಗಳು ಮಾತ್ರ ಬರುವುದೇ ಇಲ್ಲ ಎಂಬ ಆರೋಪ ಗಳು ಕೇಳಿ ಬರುತ್ತಿದೆ.
ಕೊನೆಗೆ ತಹಶೀಲ್ದಾರ್ ಅವರೇ ಅಧಿತ್ಯವಾರ ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಬರಬೇಕಾಯಿತು ಎಂದು ಅಲ್ಲಿನ‌ಜನ ಹೇಳುತ್ತಾರೆ.
ತಹಶೀಲ್ದಾರ್ , ವೈದ್ಯಾಧಿಕಾರಿ ಪೋಲೀಸರ ಜೊತೆಯಲ್ಲಿ ಟಾಸ್ಕಪೋರ್ಸ್ ಸಮಿತಿ ಯ ಅಥವಾ ಇತರ ಅಧಿಕಾರಿಗಳು ಕೈಜೋಡಿಸಿ ಕೆಲಸ ಮಾಡಿದರೆ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ ಎಂದು ಸಾರ್ವಜನಿಕ ವಲಯದ ಲ್ಲಿ ಕೇಳಿಬರುತ್ತಿರುವ ಮಾತು.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...