ಬೆಂಗಳೂರು: ರಾಜ್ಯದ ಪಠ್ಯಕ್ರಮ ಅನುಸರಿಸೋ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.



5ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 25, 26 ರಂದು ಪರೀಕ್ಷೆಗಳು ನಡೆಯಲಿವೆ. 8ನೇ ತರಗತಿ, 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 25 ರಿಂದ 28 ರವರೆಗೆ ನಿರಂತರವಾಗಿ ವಿಷಯವಾರು ಪರೀಕ್ಷೆ ನಡೆಯಲಿದೆ. ಇನ್ನು, ಮಾ.25ನೇ ತಾರೀಕಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿಗೆ ಇದ್ದ ಆತಂಕ ದೂರ ಮಾಡಿದೆ.
5ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ವೇಳಾಪಟ್ಟಿ
- ಪರಿಸರ ಅಧ್ಯಯನ : 25-03-2024
- ಗಣಿತ ಪರೀಕ್ಷೆ : 26-03-2024
ಪರಿಸರ ಅಧ್ಯಯನ ಮೌಲ್ಯಾಂಕನ ಪರೀಕ್ಷೆ ಮಧ್ಯಾಹ್ನ 02-30 ರಿಂದ 04-30 ರವರೆಗೆ ನಡೆಯಲಿವೆ. ಗಣಿತ ವಿಷಯಕ್ಕೆ ಬೆಳಿಗ್ಗೆ 10-12 ಗಂಟೆವರೆಗೆ ಪರೀಕ್ಷೆ ನಡೆಯಲಿದೆ.
8 ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪರೀಕ್ಷೆ ವೇಳಾಪಟ್ಟಿ
- ತೃತೀಯ ಭಾಷೆ ಹಿಂದಿ : 25-03-2024 (2-30 pm to 5 pm)
- ಗಣಿತ ಪರೀಕ್ಷೆ : 26-03-2024 (10 am to 12-30 pm)
- ವಿಜ್ಞಾನ ಪರೀಕ್ಷೆ : 27-03-2024 (2-30 pm to 5 pm)
- ಸಮಾಜ ವಿಜ್ಞಾನ ಪರೀಕ್ಷೆ : 28-03-2024 (10 am to 12-30 pm)
9ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪರೀಕ್ಷೆ ವೇಳಾಪಟ್ಟಿ
- ತೃತೀಯ ಭಾಷೆ ಹಿಂದಿ : 25-03-2024 (2 pm to 5 pm)
- ಗಣಿತ ಪರೀಕ್ಷೆ : 26-03-2024 (10 am to 1-15 pm)
- ವಿಜ್ಞಾನ ಪರೀಕ್ಷೆ : 27-03-2024 ( 2 pm to 5.15 pm)
- ಸಮಾಜ ವಿಜ್ಞಾನ ಪರೀಕ್ಷೆ : 28-03-2024 (10 am to 1-15 pm)