ಬಂಟ್ವಾಳ: ಬಿಜೆಪಿ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಭೆ ಇತ್ತೀಚಿಗೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಕರಿಂಕ ಎಂಬಲ್ಲಿ ನಡೆಯಿತು. ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಲೋಚನ ಭಟ್ ಅವರು “ಸದಸ್ಯತ್ವ ಜಾಸ್ತಿ ಆದಂತೆ ಸಂಘಟನಾ ಶಕ್ತಿ ಇಮ್ಮಡಿ ಆಗುತ್ತದೆ. ಪಕ್ಷ ಸುದೃಡವಾಗಿ ಬೆಳೆಯತ್ತದೆ.ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿತ ದೇಶ ಮುಖ್ಯ ಎಂಬ ಧೋರಣೆಯಂತೆ ವ್ಯಕ್ತಿಗೆ ಪ್ರಾಮುಖ್ಯತೆ ನೀಡದೇ ಪಕ್ಷಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಪಕ್ಷ ಸಂಘಟಿಸುವಂತೆ” ಕರೆ ನೀಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್ ಮಾತಾನಾಡಿ “ಅನಂತಾಡಿಯಲ್ಲಿ ಪಕ್ಷ ಬಲಿಷ್ಟವಾಗಿದೆ,ಸದಸ್ಯತ್ವ ಅಭಿಯಾನವನ್ನು ಮನೆ ಮನೆಗೂ ಪಸರಿಸಿ ಪಕ್ಷವನ್ನು ಇನ್ನಷ್ಟು ಗಟ್ಟಿ ಗೊಳಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು” ಎಂದರು. ಅಲ್ಲದೇ ಸದಸ್ಯತ್ವ ಅಭಿಯಾನದ ಕುರಿತು ಪೂರ್ಣ ಮಾಹಿತಿ ನೀಡಿದರು.
ಎಸ್ ಸಿ ಮೋರ್ಚದ ಜಿಲ್ಲಾದ್ಯಕ್ಷ ದಿನೇಶ್ ಅಮ್ಟೂರು ಮಾತಾನಾಡಿ”ಕರಿಂಕದ ಈ ದೊಡ್ಡ ಸಭೆ ಮುಂದಿನ ದಿಗ್ವಿಜಯದ ದಿಕ್ಸೂಚಿಯಾಗಿದೆ. ಬಿಜೆಪಿ ಪರಿಸರ ರಕ್ಷಣೆಗೂ ಶಾಂತಿ ಸಾಮರಸ್ಯದ ಆಡಳಿತಕ್ಕೂ ಕಟಿಬದ್ದವಾಗಿದೆ ಎಂದರು.
ಗ್ರಾಮ ಪಂಚಾಯತ್ ಸಮಿತಿ ಅದ್ಯಕ್ಷ ಚಂದ್ರಶೇಖರ್ ಕರ್ಕೇರ ಸಭೆಯ ಅದ್ಯಕ್ಷತೆ ವಹಿಸಿದ್ದು ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ಪಂಚಾಯತ್ ಅದ್ಯಕ್ಷ ಸನತ್ ಕುಮಾರ್ ರೈ, ಉಪಾದ್ಯಕ್ಷೆ ಕವಿತಾ ಉಮೇಶ್,ಪಂಚಾಯತ್ ಸದಸ್ಯರಾದ ಪುರಂದರ ಗೌಡ,ವಸಂತಿ ನಾಯ್ಕ್,ಸುಮಿತ್ರ ಕರ್ಕೇರ ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿ ಸದಸ್ಯ ನಾಗೇಶ್ ಭಂಡಾರಿ ಕರಿಂಕ ಸ್ವಾಗತಿಸಿ ವಂದಿಸಿದರು.ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು.