ಬಂಟ್ವಾಳ : ಕೊರೊನಾ ಹರಡದಂತೆ ಮುಂಜಾಗ್ರತೆಗಾಗಿ ಬಳಸಿ ಎಸೆದ ಮಾಸ್ಕ್‍ನ್ನು ಕೋತಿಯೊಂದು ಹಿಡಿದುಕೊಂಡಿದೆ. ಇದು ಕಾರಿಂಜದಲ್ಲಿ ಕಂಡು ಬಂದ ದೃಶ್ಯ. ಮಾಸ್ಕ್ ಬಳಸುವ ಜಾಗೃತಿ ಬುದ್ದಿ ಮಂಗನಿಗಾದರೂ ಇದೆ ಎಂದು ಕೊಳ್ಳುವ, ಆದರೆ ಮಾಸ್ಕ್ ಎಲ್ಲೆಂದರಲ್ಲಿ ಎಸೆದುದರಿಂದ ಆಗುವ ಅನಾಹುತ ಎಸೆದವರಿಗಿಲ್ಲದೇ ಹೋಯಿತೇ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ದಯವಿಟ್ಟು ಬಳಸಿದ ಮಾಸ್ಕ್ ಕಾರಿಂಜದಲ್ಲಿ ಮತ್ತು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಕಾರಿಂಜದ ಮ್ಯಾನೇಜರ್ ಸತೀಶ್ ಪ್ರಭು ತಿಳಿಸಿದ್ದಾರೆ.


