ಬಂಟ್ವಾಳ: ಕಾರಿಂಜ ಮಹತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶ ಮಾಡಿ ಚಪ್ಪಲಿ ಹಾಕಿಕೊಂಡು ಹೋಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತ್ರತ್ವದ ಪೋಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕಾಸರಗೋಡು ಹಾಗೂ ಉಳ್ಳಾಲ ಮೂಲದ ನಾಲ್ವರು ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಘಟನೆಯ ಬಗ್ಗೆ ತಪ್ಪೊಪ್ಪುಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಾಸ್ತಿಕಟ್ಟೆ ಉಲ್ಲಾಳ ಮಂಗಳೂರು ನಿವಾಸಿ U K ಬಶೀರ್ ಅವರ ಮಗ ಬುಶೇರ್ ರೆಹಮಾನ (20)
ಮುಕ್ಕಚ್ಚೇರಿ ಮನೆ ಉಳ್ಳಾಲ ಮಂಗಳೂರು ನಿವಾಸಿ ಅಬ್ದುಲ್ ಖಾದರ್ ಅವರ ಮಗ ಇಸ್ಮಾಯಿಲ್ ಅರ್ಹ ಮಾಜ್
ಹಳೆಕೋಟೆ ಮನೆ ಉಲ್ಲಾಳ ಮಂಗಳೂರು ನಿವಾಸಿ ಉಮ್ಮರ್ ಫಾರೂಖ್ ಅವರ ಮಗ ಮಹಮ್ಮದ್ ತಾನಿಶ್ (19)
ತನ್ವೀರ್ ಕ್ವಾಟೇಜ್ ಬಬ್ಬುಕಟ್ಟೆ ಪೆರ್ಮನ್ನೂರು ಮಂಗಳೂರು ನಿವಾಸಿ ಬದ್ರುದ್ದೀನ್ ಅವರ ಮಗ
ಮೊಹಮ್ಮದ್ ರಶಾದ್(19) ಬಂಧಿತ ಆರೋಪಿಗಳು.
ಆರೋಪಿಗಳು ಅಕ್ರಮವಾಗಿ ದೇವಳದ ಒಳಗೆ ಚಪ್ಪಲಿ ಹಾಕಿ ಪ್ರವೇಶ ಮಾಡಿ ಹಿಂಧೂಗಳ ಭಾವನೆಗಳಿಗೆ ದಕ್ಕೆ ತಂದಿದ್ದು. ಅಲ್ಲದೆ ಅದನ್ನು ದೇವಸ್ಥಾನದಲ್ಲಿ ಚಪ್ಪಲಿ ಹಾಕಿ ನಡೆದಾಡುವ ವಿಡಿಯೋ ವನ್ನು ಸಾಮಾಜಿಕ ಜಾಲತಾಣ ದಲ್ಲಿ ಹಾಕಿ ವಿಜ್ರಂಭಿಸಿ ಹಿಂಧುಗಳ ಧಾರ್ಮಿಕ ನಂಬಿಕೆಗೂ ಧಕೆ ತಂದಿದ್ದು ಇದನ್ನು ದೇವಸ್ಥಾನದ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು ಆರೊಪಿಗಳನ್ನು ಶೀಘ್ರ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಪುಂಜಾಲಕಟ್ಟೆ ಠಾಣೆಗೆ ಮನವಿ ನೀಡಿತ್ತು.
ಘಟನೆ ಗೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಪುಂಜಾಲಕಟ್ಟೆ ಪೋಲೀಸರು ನಾಲ್ವರು ಆರೋಪಿಗಳನ್ನುಬಂಧಿಸಿದ್ದಾರೆ.
.ಇನ್ನುಳಿದಂತೆ ಇಬ್ಬರು ಆರೋಪಿಗಳು ಈ ಘಟನೆಯಲ್ಲಿ ಇದ್ದ ಬಗ್ಗೆ ವಿಡಿಯೋ ದಲ್ಲಿ ಸೆರೆ ಯಾಗಿ ದ್ದು ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

