ಬಂಟ್ವಾಳ : ‘ಕಾರಿಂಜ ಗಧಾ ತೀರ್ಥ ಬತ್ತುವ ಭೀತಿ’ ಅಕ್ರಮವಾಗಿ ಕೆರೆಯ ನೀರು ಸಾಗಾಟವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿದ ಮರು ದಿನದಿಂದಲೇ ಎಚ್ಚೆತ್ತುಕೊಂಡ ಟ್ಯಾಂಕರ್ ನೀರು ಸರಬರಾಜುದಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕಾರಿಂಜೇಶ್ವರ ಕ್ಷೇತ್ರದಲ್ಲಿ ಪಾವಿತ್ರ್ಯತೆಯನ್ನು ಹೊಂದಿರುವ ಕೆರೆಗೆ ನಾಲ್ಕು ಕಡೆಗಳಲ್ಲಿಯೂ ಪೈಪ್‌ಗಳನ್ನು ಜೋಡಿಸಿ ಅದರಿಂದ ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ ನೀರು ಸರಬರಾಜಾಗುತ್ತಿತ್ತು. ಎರಡು ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು ಸ್ಥಳೀಯರಲ್ಲಿ ಗದಾತೀರ್ಥದ ನೀರು ಖಾಲಿಯಾಗುವ ಆತಂಕ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ವರದಿ ಪ್ರಕಟವಾದ ದಿನ ಬೆಳಿಗ್ಗೆಯಿಂದಲೇ ಯಾರ ಪತ್ತೆಯೂ ಇಲ್ಲ. ಗಧಾ ತೀರ್ಥಕ್ಕೆ ಜೋಡಿಸಿದ್ದ ಟ್ಯಾಂಕರ್ ನೀರಿಗೆ ಸೇರಿಸಲು ಹಾಕಲಾಗಿದ್ದ ಪುಟ್‌ಬಾಲ್ ಪೈಪ್‌ಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಅಲ್ಲಿನ ಸ್ಥಳೀಯರು ಮತ್ತು ಭಕ್ತಾದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಕೆರೆಯಲ್ಲಿದ್ದ ಜಲಚರಗಳಿಗೂ ಜೀವ ಬಂದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಇಲ್ಲಿನ ನೀರು ದಿನವೊಂದಕ್ಕೆ 4 ಟ್ಯಾಂಕ್ ರುಗಳು 100 ಟ್ಯಾಂಕ್ ರುಗಳಿಂತಲೂ ಹೆಚ್ಚು ಸರಬರಾಜು ಮಾಡಲಾಗುತ್ತಿತ್ತು.
ಸುಧಾಕರ ಶೆಟ್ಟಿ ಅವರಿಗೆ ಸೇರಿದ ಮೊಗರೋಡಿ ಕಂಪೆನಿಯ ಲಾರಿಗಳ ಮೂಲಕ ನೀರು ಸರಬರಾಜು ಆಗುತ್ತಿತ್ತು.
ಕಾರಿಂಜ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದಾಗಿದೆ.
ಆದರೂ ಇಲಾಖಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ವ್ಯವಸ್ಥಾಪಕ ರು ಮಾತ್ರ ನೋಡಿಯೂ ಸುಮ್ಮನಾಗಿದ್ದರಿಂದ ಇಲ್ಲಿನ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದರು.