ಬಂಟ್ವಾಳ: ಕಾರ್ಗಿಲ್ ವಿಜಯ ದಿವಸ್ ನ ಈ ಸುಸಂರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ಕಾರ್ಯಕರ್ತರು ಕಾರ್ಗಿಲ್ ವಿಜಯದ 20ನೇ ವರ್ಷಾಚರಣೆಯ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ತಾಯಿ ಭಾರತಾಂಬೆಯ ಸೇವೆಗೈದ ಭಾರತೀಯ ಸೇನೆಯ ಕರ್ನಲ್ ಮನೀಷ್ , ಜೋಧ್ ಸಿಂಗ್ ಹಾಗೂ ಜಿ.ಕೆ ಶರ್ಮಾ ಅವರನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಜೋಧಾ ಸಿಂಗ್ ರವರು ಕಾರ್ಗಿಲ್ ಯುದ್ಧದ ಸಂದರ್ಭದ ನೆನಪುಗಳನ್ನು ಸ್ಮರಿಸಿಕೊಂಡರು. ಹಾಗೆಯೇ ಕದ್ರಿಯ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಾಯಿತು. ಅ.ಭಾ.ವಿ.ಪ. ಕಾರ್ಯಕರ್ತರಾದ ನಂದ, ಆದರ್ಶ್, ಹರ್ಷಿತ್, ನಾಗರಾಜ್, ಪ್ರತೀಕ್,ಅಖಿಲಾಷ್,ಸಚಿನ್, ಭರತ್,ಸನತ್,ವೆಂಕಟೇಶ್ ಉಪಸ್ಥಿತರಿದ್ದರು.