ಬಂಟ್ವಾಳ : ಸೆ.7ರಂದು ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಹಾಗೂ ಆಲ್ ಇಂಡಿಯಾ ಶಿಟೊರಿಯು ಕರಾಟೆ-ಡೊ ಯುನಿಯನ್ ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಯತಿಶ್ ಕುಮಾರ್. ವಿ ಇವರು ಪಿಯುಸಿ ವಿಭಾಗದ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ ಹಾಗೂ ಕುಮಿಟೆ ಎರಡು ವಿಭಾಗದಲ್ಲು ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ 16 ವರ್ಷ ಮೇಲ್ಪಟ್ಟ ಹುಡುಗರ ಗ್ರಾಂಡ್ ಚಾಂಪಿಯನ್ಶಿಪ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ಮಣಿಹಳ್ಳದ ವಸಂತ ಕುಮಾರ್. ವಿ ಹಾಗೂ ಮೀನಾಕ್ಷಿ. ವಿ ದಂಪತಿಯ ಮಗನಾಗಿರುತ್ತಾನೆ. ಇವರು ಕಾನ್. ರಿಯು. ಆರ್. ವಿ. ಟೈಗರ್ಸ ಮರ್ಶಿಯಲ್ ಆರ್ಟ್ಸ್ ಕರ್ನಾಟಕ ತಂಡದ ವಿದ್ಯಾರ್ಥಿ.
ಇವರು ಶಿಹಾನ್ ವಸಂತ್ ಕೆ ಬಂಗೇರ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ಸಂತ್ ಅಲೋಶಿಯಸ್ ಪಿ.ಯು ಕಾಲೇಜು ಮಂಗಳೂರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.


