Friday, January 30, 2026

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶ: ಬಂಟ್ವಾಳ ತಾಲೂಕು ಸಮಿತಿ ಪ್ರಮುಖರ ಸಭೆ

 

ಬಂಟ್ವಾಳ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗೀ ಸಹಿತ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಗೆ ಸಂಬಂಧಿಸಿ ತಾಲೂಕು ಸಮಿತಿಯ ಪ್ರಮುಖರ ಸಮಾಲೋಚನಾ ಸಭೆ ಫೆ. 13ರಂದು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಕಚೇರಿಯಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವದ ದ.ಕ.ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ.ಶೆಟ್ಟಿ ಅವರು ಮಾತನಾಡಿ, ಬ್ರಹ್ಮಕಲಶದ ಹಿನ್ನೆಲೆ ನಡೆದ ನವದುರ್ಗಾ ಲೇಖನ ಯಜ್ಞದಲ್ಲಿ ಜಿಲ್ಲೆಯಿಂದ 9,999 ಮಂದಿ ಪಾಲ್ಗೊಂಡಿದ್ದು, ಬಂಟ್ವಾಳದಿಂದ 1200 ಮಂದಿ ಪಾಲ್ಗೊಂಡಿದ್ದಾರೆ. ಸುಮಾರು 99 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲುವ ಕಾಪು ಕ್ಷೇತ್ರವು ದಕ್ಷಿಣ ಭಾರತದಲ್ಲೇ ವಿಶೇಷವಾಗಿದೆ. 20 ಕೆಜಿ ಬಂಗಾರದ ಸ್ವರ್ಣ ಗದ್ದುಗೆಗೆ ಕೇವಲ 2 ತಿಂಗಳಲ್ಲಿ ಭಕ್ತರು ಬಂಗಾರ ಸಮರ್ಪಣೆ ಮಾಡಿದ್ದು, 150 ಕೆಜಿ ಬೆಳ್ಳಿಯ ರಥ, ಅಯೋಧ್ಯೆಯ ಬಳಿಕ 2ನೇ ಅತಿ ದೊಡ್ಡ ಗಂಟೆಯ 40 ಲಕ್ಷ ರೂ.ವೆಚ್ಚದಲ್ಲಿ ಸಿದ್ಧಗೊಂಡಿದ್ದು, ಅದನ್ನು ಒಮ್ಮೆ ಬಾರಿಸಿದರೆ 5 ಕಿ.ಮೀ.ಕಂಪನಗೊಳ್ಳುತ್ತದೆ. ಹೀಗೆ ಹಲವು ವಿಶೇಷತೆಗಳಿರುವ ಕ್ಷೇತ್ರದ ಬ್ರಹ್ಮಕಲಶ 9 ದಿನಗಳ ಕಾಲ ನಡೆಯಲಿದ್ದು, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿಟ್ಟಿನಲ್ಲಿ ತಾಲೂಕು ಸಮಿತಿಯವರು ಪ್ರಯತ್ನಿಸಬೇಕಿದೆ.
ಫೆ. 22ರಂದು ದಕ್ಷಿಣ ವಾಹಿನಿ ಹೆಸರಿನಲ್ಲಿ ದ.ಕ.ಜಿಲ್ಲೆಯಿಂದ ಹೊರೆಕಾಣಿಕೆ ಸಮರ್ಪಣೆಗೊಳ್ಳಲಿದ್ದು, ಬಂಟ್ವಾಳದ ಪ್ರತಿ ಭಾಗದಿಂದಲೂ ಹೊರೆಕಾಣಿಕೆ ಸಮರ್ಪಣೆಯಾಗಬೇಕಿದೆ. ತಾಲೂಕಿನ ಪ್ರಮುಖರು ಪ್ರತಿಯೊಂದು ಧಾರ್ಮಿಕ ಕ್ಷೇತ್ರದ ಜತೆಗೆ ಭಕ್ತರಲ್ಲಿ ವಿನಂತಿಸಬೇಕಿದ್ದು, ಮೊದಲೇ ಸಮರ್ಪಣೆ ಮಾಡುವವರು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಕಚೇರಿಯಲ್ಲಿ ನೀಡಬಹುದಾಗಿದೆ. ಅಕ್ಕಿ ಸಮರ್ಪಣೆ ಮಾಡುವವರು ಸ್ವಸ್ತಿಕ್ ಬ್ರಾಂಡ್‌ಗೆ ಆದ್ಯತೆ ನೀಡಬೇಕಿದ್ದು, ಇಲ್ಲದೇ ಇದ್ದರೆ ಡಾಲರ್, ಟೈಗರ್ ಬ್ರಾಂಡ್ ನೀಡಬಹುದು. ಜತೆಗೆ ಬ್ರಹ್ಮಕಲಶದ ಸೇವಾ ಕಾರ್ಯದಲ್ಲೂ ಭಾಗವಹಿಸಲು ಅವಕಾಶವಿದೆ ಎಂದರು.
ಬಂಟ್ವಾಳ ತಾಲೂಕು ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಅವರು ಆಮಂತ್ರಣ ಹಂಚಿಕೆಯ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಪ್ರಮುಖರಾದ ಗಣೇಶ್ ಸುವರ್ಣ, ಕರುಣೇಂದ್ರ ಪೂಜಾರಿ, ಉಮೇಶ್ ಸಾಲ್ಯಾನ್ ಬೆಂಜನಪದವು, ಸೀತಾರಾಮ ಶೆಟ್ಟಿ, ಶಂಕರ ಶೆಟ್ಟಿ, ಸತೀಶ್ ಶೆಟ್ಟಿ ಮೊಡಂಕಾಪು, ಭಾರತಿ ಚೌಟ, ಪುಷ್ಪರಾಜ್ ಶೆಟ್ಟಿ, ವಸಂತಿ ಎಲ್.ಶೆಟ್ಟಿ, ಹರೀಶ್ ಪೆದಮಲೆ, ಜಗನ್ನಾಥ ರೈ ಮೇರಾವು, ನವೀನ್ ಕೊಡ್ಮಾಣ್, ಮಣಿಮಾಲಾ ಶೆಟ್ಟಿ, ಉಮಾ ಚಂದ್ರಶೇಖರ ತುಂಬೆ ಉಪಸ್ಥಿತರಿದ್ದರು.

More from the blog

ಜ.31ರಂದು ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮವು ಜ.31ರಂದು ಪ್ರಾಂತೀಯ ಅಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಿ. ಇವರ ಅಧ್ಯಕ್ಷತೆಯಲ್ಲಿ ಜ.31ರಂದು ಬಜಾರ್ ಆಡಿಟೋರಿಯಂ ಕಂದೂರು ಸಜಿಪಮೂಡದಲ್ಲಿ ನಡೆಯಲಿದೆ ಎಂದು ಸಮ್ಮೇಳನ...

ಕಟೀಲು 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.30ರ ಸೇವೆಯಾಟಗಳ ವಿವರ : ವಾಸು ಶೆಟ್ಟಿ, 'ಶ್ರೀದೇವಿ ಕೃಪಾ, 7ನೇ...

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...