ವಿಟ್ಲ: ಕನ್ಯಾನ ಚೆಡವು ದುಲ್‌ಪುಕಾರ್ ಸೇವಾ ಸಂಘ ಮತ್ತು ದುಲ್‌ಪುಕಾರ್ ನ್ ಮಸೀದಿಗಲ್ಫ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಕನ್ಯಾನ ಮಖಾಂಝಿಯಾರತ್‌ನೊಂದಿಗೆ ಕನ್ಯಾನ ಟೌನ್ ಮಸೀದಿಯಲ್ಲಿ ರಮಳಾನ್ ತರಗತಿ ಹಾಗೂ ಕಿಟ್ ವಿತರಣೆ ನಡೆಯಿತು.
ಶೈಖುನಾ ಕನ್ಯಾನ ಉಸ್ತಾದ್ ದುವಾ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು. ಕುಕ್ಕಾಜೆ ಸಿರಾಜುದ್ದೀನ್ ಸಖಾಫಿ ರಮಾಳಾನ್ ಪ್ರಭಾಷಣಗೈದರು.
ಇದೇ ಅಬ್ದುಲ್‌ಖಾದರ್ ಸದಿ, ಹಮೀದ್ ಸಖಾಫಿ ಪಾಡಿ, ಅಶ್ರಫ್ ಮದನಿ ಚೆಂಬರ್ಪು, ಇಸ್ಮಾಯಿಲ್ ಹಾಜಿ ಪೊಯ್ಯಕಂಡ, ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುರ್ರಹ್ಮಾನ್, ಅದ್ದುಚ್ಚ ಚೆಡವು, ಗಲ್ಫ್ ಕಮಿಟಿ ಉಪಾಧ್ಯಕ್ಷ ಜಲಾಲ್ ಮರಾಠಿಮೂಲೆ, ದುಲ್‌ಪುಕಾರ್ ಸೇವಾ ಸಂಘದ ಅಧ್ಯಕ್ಷ ಆಸೀಫ್ ಬನಾರಿ, ಕಮಿಟಿ ಪದಾಧಿಕಾರಿಗಳು, ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದುಲ್‌ಪುಕಾರ್ ಗಲ್ಫ್ ಸಮಿತಿಯಿಂದ ಬಡ ಮತ್ತು ಅನಾಥರಾದ 90 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.


