ವಿಟ್ಲ: ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಐದನೇ ಪುತ್ರ ರವಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ರವಿ ತಾಯಿ ಮತ್ತು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಇವರು ಖಾಸಗಿ ವಾಹನದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು.