ಬಂಟ್ವಾಳ: ಕನ್ಯಾನ ಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರ ಕಾಂಡ ತೀರ್ಥಯಾತ್ರೆ ಕೈಗೊಂಡಿದ್ದಾರೆ.
ಅವರು ಕ್ಷೇತ್ರದಿಂದ ಮೇ.10 ರಂದು ಹೊರಟಿದ್ದಾರೆ.

ಬದರೀನಾಥ, ಉತ್ತರ ಕಾಶಿ, ಗಂಗೋತ್ರಿ, ಪ್ರಯಾಗ್ ಮುಂತಾದ ಕಡೆಗಳಿಗೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ ಎಂದು ಅವರ ಮಠದ ಪ್ರಕಟನೆ ತಿಳಿಸಿದೆ.
ಇವರ ಜೊತೆ ಕನ್ಯಾಡಿ ಕ್ಷೇತ್ರದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಪ್ರಮುಖ ರಾದ ಸಂಜೀವ ಪೂಜಾರಿ ಜಿತೇಶ್, ರಾಜಾ ಬಂಟ್ವಾಳ ಸೇರಿದಂತೆ ಸುಮಾರು 102 ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.