ಬಂಟ್ವಾಳ: ಫೆ.20ರಂದು ಉದ್ಘಾಟನೆಗೊಳ್ಳಲಿರುವ ಕನ್ನಡ ಭವನ ಮತ್ತು 21ರಂದು ನಡೆಯಲಿರುವ ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಸಾಹಿತಿ ಪಲ್ಲವಿ ಕಾರಂತ ಫೆ.13ರ ಸಂಜೆ ಉದ್ಘಾಟಿಸಿದರು. ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನದ ಮುಂಭಾಗದ ಸಾಧನಾ ರೆಸಿಡೆನ್ಸಿಯಲ್ಲಿ ಕಾರ್ಯಾಲಯವಿದೆ. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ, ಅಧ್ಯಕ್ಷ ಐತಪ್ಪ ಆಳ್ವ, ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್, ವಿವಿಧ ಪದಾಧಿಕಾರಿಗಳಾದ ಕೊಳಕೆ ಗಂಗಾಧರ ಭಟ್, ಮಹಾಬಲೇಶ್ವರ ಹೆಬ್ಬಾರ, ಶಿವಶಂಕರ್, ನಾಗೇಶ್ ರಾವ್, ಕಚೇರಿ ನಿರ್ವಹಣೆಯ ಜಗದೀಶ್ ಉಪಸ್ಥಿತರಿದ್ದರು. ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿ ವಂದಿಸಿದರು.

