ವಿಟ್ಲ: ಮೊಬೈಲ್ ಅಂಗಡಿಗೆ ಹಾಡು ಹಾಕಲು ತೆರಳಿದ್ದ ಅನ್ಯಧರ್ಮದ ಅಪ್ರಾಪ್ತ ಬಾಲಕಿ ಮೇಲೆ ಅಂಗಡಿ ಮಾಲಕ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಘಟನೆ ಬಗ್ಗೆ ವಿಟ್ಲ ಪ್ರಖಂಡ ಬಜರಂಗದಳದ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಅವರು ಘಟನೆಯನ್ನು ಖಂಡಿಸಿದ್ದು, ಇಂತಹ ಹೀನ ಕೃತ್ಯವೆಸಗಿದ ಸಲಾಂ ತನ್ನ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿದಂತೆ ಇದೀಗ ತಲೆ ಮರೆಸಿಕೊಂಡಿದ್ದಾನೆ. ಒಂದು ವೇಳೆ ಪೊಲೀಸ್ ಅಧಿಕಾರಿಗಳು ಈತನನ್ನು ಬಂಧಿಸುವ ಮುನ್ನ ಬಜರಂಗದಳ ಕಾರ್ಯಕರ್ತರ ಕೈಗೆ ಸಿಕ್ಕಿದಲ್ಲಿ ಆತನ ತಲೆ ಬೋಳಿಸಿ ಹಂದಿ ಮೇಲೆ ಕುಳ್ಳಿರಿಸಿ ಮಾಣಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಗುವುದು. ಇದಕ್ಕಾಗಿ ನಮಗೆ ಗಲ್ಲು ಶಿಕ್ಷೆ ವಿಧಿಸಿದರೂ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ . ಯಾವುದೇ ಬಾಲಕಿಯ ಮೇಲಾದ ದೌರ್ಜನ್ಯ ನಮ್ಮ ಮನೆ ಮಗಳಿಗೆ ಆದಂತೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ. ಪೊಲೀಸ್ ಅಧಿಕಾರಿಗಳು ಸಲಾಂ ಎಂಬಾತನನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಬಜರಂಗದಳ ಹಾಗೂ ಮತ್ತಿತರ ಹಿಂದೂ ಪರ ಸಂಘಟನೆಗಳು ಒಗ್ಗಟ್ಟಾಗಿ ಮಾಣಿ ನಗರದ ಸಂಪೂರ್ಣ ಬಂದ್ ಗೆ ಕರೆ ನೀಡಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.