ಬಂಟ್ವಾಳ ತಾಲೂಕು ಕುರಿಯಾಳ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವಸ್ಥಾನದಲ್ಲಿ ಉಗ್ಗೆದಲ್ತಾಯ ದೈವದ ವರ್ಷಾವಧಿ ಸಾಂದಾಯನ ಮಾ.24 ರಂದು ನಡೆಯಲಿದೆ.

ಮಾ.24 ರಂದು ಬೆಳಿಗ್ಗೆ 5.30 ಗಂಟೆಗೆ ಭಂಡಾರದ ಮನೆಯಿಂದ ಕಾಂಬೋಡಿಗುತ್ತು ಒಳಗುಡ್ಡೆ ದೈವಸ್ಥಾನಕ್ಕೆ ಭಂಡಾರ ಬರುವುದು. ರಾತ್ರಿ 08 ಗಂಟೆಯಿಂದ ಕಾಂಬೋಡಿಗುತ್ತಿನ ಮನೆಯಲ್ಲಿ ಅನ್ನದಾನ ನಡೆಯಲಿದೆ. ಬಳಿಕ ಶ್ರೀ ಉಗ್ಗೆದಲ್ತಾಯ ದೈವದ ನೇಮೋತ್ಸವ ನಡೆಯಲಿದೆ.
ಮಾ.26 ರಂದು ಕಾಂಬೋಡಿಗುತ್ತು ಒಳಗುಡ್ಡೆ ದೈವಸ್ಥಾನದ ಹತ್ತಿರ ಮಾರಿ ಪೂಜೆ ನಡೆಯಲಿರುವುದು.