ವಿಟ್ಲ: ಕಂಬಳಬೆಟ್ಟು ಮುಹಿಯುದ್ದೀನ್ ಮತ್ತು ಇಬ್ರಾಹಿಂ ಮಸೀದಿಯ ಪದಾಧಿಕಾರಿಗಳ, ದಾನಿಗಳ, ನುಶ್ರತ್ತುಲ್ ಮಸಾಕೀನ್ ಯಂಗ್‍ಮೆನ್ಸ್ ಹಾಗೂ ಜನಪ್ರಿಯ ಟ್ರಸ್ಟ್ ನೇತೃತ್ವದಲ್ಲಿ ಸರ್ವಧರ್ಮಿಯರಿಗೆ ಒಟ್ಟು 360 ಕುಟುಂಬಗಳಿಗೆ ರಂಝಾನ್ ಕಿಟ್ ಹಾಗೂ ದಿನಸಿ ಸಾಮಗ್ರಿ ವಿತರಿಸಲಾಯಿತು.
ವಲಸೆ ಕಾರ್ಮಿಕರಿಗೆ ಹಾಗೂ ಸ್ಥಳೀಯ ಅನ್ಯ ಧರ್ಮಿಯರಿಗೆ ವಿತರಿಸಲಾಯಿತು. ಕಂಬಳಬೆಟ್ಟು ಖತೀಬು ಇಬ್ರಾಹಿಂ ಮದನಿ ದುವಾಃ ಮಾಡಿದರು. ಮಸೀದಿ ಅಧ್ಯಕ್ಷ ಮೊಹಿದು ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಕಾರ್ಯದರ್ಶಿ ಶಾಹುಲ್ ಹಮೀದ್ ನೆಕ್ಕರೆ, ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುನ್ನೀ, ಕೋಶಾಧಿಕಾರಿ ಖಾದರ್ ನೆಕ್ಕರೆ, ಅಬ್ಬಾಸ್ ದಾಸರಬೆಟ್ಟು, ಮೊಹಮ್ಮದ್ ಕೆಮ್ಮಾಯಿ, ಹಸೈನಾರ್ ಕೊಳಂಬೆ ಬಾಂಬೆ, ಮೊಹಮ್ಮದ್, ನೌಶೀನ್ ಮೊದಲಾದವರು ಭಾಗವಹಿಸಿದ್ದರು.


