ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ ಬಿಜೆಪಿ ಎರಡನೇ ವಾರ್ಡ್ ಸಮಿತಿ ವತಿಯಿಂದ ‘ಕಮಲ ಜ್ಯೋತಿ’ ಕಾರ್‍ಯಕ್ರಮವು ಅಪ್ಪಾಜಿ ರಾವ್ ಸಂಕೀರ್ಣದಲ್ಲಿ ನಡೆಯಿತು. ಪಕ್ಷದ ಮಹಿಳಾ ಮೋರ್ಚಾದ ಸದಸ್ಯೆಯರು ಕಮಲದ ರಂಗೋಲಿ ಬಿಡಿಸಿ, ದೀಪ ಬೆಳಗಿಸಿ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಜಿ. ರಾವ್ ಇವರು ಭಾಗವಹಿಸಿದ್ದರು. ಯುವ ಮೋರ್ಚಾ ನಗರಾಧ್ಯಕ್ಷ ರಾಜೇಶ್ ಬೊಬ್ಬೆಕ್ಕೇರಿ, ಅನಂತ ಪ್ರಸಾದ್, ಹಿಂದೂ ಯುವ ಸೇನೆ ಗೌರವಾಧ್ಯಕ್ಷ ಹರೀಶ್ ವಿಟ್ಲ, ವಾರ್ಡ್ ಅಧ್ಯಕ್ಷ ಕೇಶವ ಗೌಡ, ಕಾರ್‍ಯದರ್ಶಿ ಜಯಾನಂದ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಕೃಷ್ಣ ಸ್ವಾಗತಿಸಿ, ನಿರೂಪಿಸಿದರು. ನಗರ ಬಿಜೆಪಿ ಕಾರ್‍ಯದರ್ಶಿ ಜಗದೀಶ ಪಾಣೆಮಜಲು ವಂದಿಸಿದರು.

