Wednesday, February 4, 2026

ಫೆ.25: ಕರಾವಳಿ ಕಲೋತ್ಸವ ಸಮಾರೋಪ *ಚಂದ್ರನ್* ಕಿರು ಚಿತ್ರದ ಟ್ರೈಲರ್ ಬಿಡುಗಡೆ

ಬಂಟ್ವಾಳ: ಮಂತ್ರದೇವತೆ ಕ್ರಿಯೇಶನ್ ನಿರ್ಮಾಣದಲ್ಲಿ  ಬಿಡುಗಡೆಗೆ ಸಿದ್ಧಗೊಂಡಿರುವ ಕಿರು ಚಿತ್ರ ಚಂದ್ರನ್ ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕರಾವಳಿ ಕಲೋತ್ಸವ ೨೦೨೧ ಇದರ ಸಮಾರೋಪದಲ್ಲಿ ಬಿ.ಸಿ.ರೋಡ್‌ನ ಗೋಲ್ಡನ್ ಪಾರ್ಕ್ ಮೈದಾನದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆಯಲಿದೆ.

ಕಿರು ಚಿತ್ರವನ್ನು ಚಲನಚಿತ್ರ ನಟ, ರಂಗಭೂಮಿ ರಮೇಶ್ ರೈ ಕುಕ್ಕುವಳ್ಳಿ ಅವರು ಬಿಡುಗಡೆಗೊಳಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಕಲೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿರುವರು.

ಕಿರುಚಿತ್ರದ ಕಥೆ ಕುಶಲ್ ಗೌಡ ಹೊಸಮನೆ, ರಕ್ಷಿತ್ ರೈ ಪುಂಜಾಲಕಟ್ಟೆ ನಿರ್ದೇಶನದಲ್ಲಿ ,ಜಯರಾಜ್ ಅತ್ತಾಜೆ ಮತ್ತು ಸಚಿನ್ ಅತ್ತಾಜೆ ಸಹ ನಿರ್ದೇಶನದಲ್ಲಿ ,ಗುರು ಬಾಯಾರು ಸಂಗೀತವಿದ್ದು , ಸವ್ಯರಾಜ್ ಕಲ್ಲಡ್ಕ ಅವರ ಪ್ರಸಾಧನವಿದೆ. ಕ್ರಿಯೇಟಿವ್ ಕ್ಯಾಮೆರಾಮೆನ್ ಬಾತು ಕುಲಾಲ್  ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ಕಿರು ಚಿತ್ರದಲ್ಲಿ ಚಲನಚಿತ್ರ ನಟ ಡಿ.ಎಸ್. ಬೋಳೂರು,  ರತ್ನದೇವ್ ಪುಂಜಾಲಕಟ್ಟೆ , ಜಯರಾಜ್ ಅತ್ತಾಜೆ, ಸಚಿನ್ ಅತ್ತಾಜೆ, ನಮಿತಾ ಸುವರ್ಣ, ಹರಿಶ್ಚಂದ್ರ ಶೆಟ್ಟಿಗಾರ್, ದಾಮೋದರ ಆಚಾರ್ಯ, ಜಗದೀಶ ಮತ್ತಿತರರು ಅಭಿನಯಿಸಿರುವರು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...