Monday, January 26, 2026

ಬಿಸಿರೋಡಿನ ಹೆಸರಾಂತ ಮೆಡಿಕಲ್ ಸೆಂಟರ್ ಹಾಗೂ ದಿನಸಿ ಅಂಗಡಿಯಿಂದ ಕಳ್ಳತನ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ಬೆಂಗಳೂರು ರಸ್ತೆಯ ಮಧ್ಯೆ ಬಿಸಿರೋಡಿನ ಹೃದಯ ಭಾಗದಲ್ಲಿರುವ ಹೆಸರಾಂತ ಮೆಡಿಕಲ್ ಸೆಂಟರ್ ಹಾಗೂ ಪಕ್ಕದಲ್ಲಿರುವ ದಿನಸಿ ಅಂಗಡಿವೊಂದಕ್ಕೆ ಕಳ್ಳರು ನುಗ್ಗಿದ ಘಟನೆಯ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ನಗರ ಪೋಲೀಸ್ ಸ್ಟೇಷನ್ ನ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಗೆ ತಾಗಿಕೊಂಡು ಪೇಟೆಯ ಮಧ್ಯ ಭಾಗದಲ್ಲಿ ಹಲವಾರು ವರ್ಷಗಳಿಂದ ಜನರ ಸೇವೆಯಲ್ಲಿರುವ ಹೆಸರಾಂತ ಗಣೇಶ್ ಮೆಡಿಕಲ್ ಸೆಂಟರ್ ಗೆ ಹಾಗೂ ಇಸುಬು ಬ್ಯಾರಿಯವರ ಮಗ ಯೂನಸ್ ಎಂಬವರ ದಿನಸಿ ಅಂಗಡಿಯ ಶಟರ್ ನ ಬೀಗ ಮುರಿದು ಒಳಗೆ ನುಗ್ಗಿ ಡ್ರವರ್ ನೊಳಗೆ ಇದ್ದ ನಗದು ಹಣವನ್ನು ದೋಚಿದ ಘಟನೆ ಬುಧವಾರ ನಡೆದಿದೆ.
ಗಣೇಶ್ ಮೆಡಿಕಲ್ ಸೆಂಟರ್ ಗೆ ನುಗ್ಗಿದ ಕಳ್ಳರು ಡ್ರವರನೊಳಗೆ ಇಟ್ಟಿದ್ದ 3000 ಸಾವಿರ ನಗದು ಹಣ ಹಾಗೂ ಕಂಪ್ಯೂಟರ್ ಮಾನಿಟರ್ ಒಂದನ್ನು ಕಳ್ಳತನ ಮಾಡಿದ್ದಾರೆ.

ಯೂನಸ್ ಅವರ ಅಂಗಡಿಯಿಂದ ಕ್ಯಾಸ್ ಕೌಂಟರ್ ನೊಳಗೆ ಇದ್ದ 5000 ಸಾವಿರ ನಗದು ಹಾಗೂ ಸಾವಿರಾರು ರೂ ಬೆಲೆಬಾಳುವ ದಿನಬಳಕೆಯ ವಸ್ತುಗಳನ್ನು ಕಳವು ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಂಗಡಿಯವರ ದೂರಿನಂತೆ ಬಂಟ್ವಾಳ ನಗರ ಠಾಣೆ ಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

*ವ್ಯಾಪಾರಿಗಳ ಕಳವಳ*
ಬಿಸಿರೋಡಿನ ಹೃದಯಭಾಗದಲ್ಲಿ ಪೋಲೀಸ್ ಠಾಣೆಯ ಹತ್ತಿರದಲ್ಲೇ ಕಳ್ಳತನ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲಕರುಗಳ ಎದೆಯಲ್ಲಿ ನಡುಕ ಉಂಟಾಗಿದೆ.
ಮೆಡಿಕಲ್ ಸೆಂಟರ್ ಪಕ್ಕದಲ್ಲಿರುವ ಹನಿಯಾ ದರ್ಬಾರ್ ಹೋಟೆಲ್ ಗೆ ಕಳೆದ ಕೆಲ ತಿಂಗಳ ಹಿಂದೆ ಎರಡು ಬಾರಿ ಕಳ್ಳರು ನುಗ್ಗಿದ್ದಾರೆ.
ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಅಂಗಡಿಗಳಿಂದ ಕಳ್ಳತನ ನಡೆಯುವುದು ವ್ಯಾಪಾರಿಗಳಿಗೆ ಕಳವಳದ ಸಂಗತಿಯಾಗಿದೆ.
ಲಾಕ್ ಡೌನ್ ಬಳಿಕ ವ್ಯಾಪಾರ ಇಲ್ಲದೆ ಜನ ಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿ ಯಾಗಿದೆ.
ಈ ನಡುವೆ ಕಳ್ಳತನ ಗಳು ನಡೆಯುವುದು ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿದೆ.

More from the blog

ಮಾಣಿಯಲ್ಲಿ ಹಿಂದೂ ಸಂಗಮ…

ಬಂಟ್ವಾಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಪ್ರಯುಕ್ತ ಮಾಣಿ ಪೆರಾಜೆ ಬರಿಮಾರ್ ನೆಟ್ಲ ಮುಡ್ನೂರು, ಅನಂತಾಡಿ ಗ್ರಾಮಗಳನ್ನು ಒಳಗೊಂಡ ಮಾಣಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ನೇರಳಕಟ್ಟೆ ಗಣೇಶ ನಗರದಿಂದ ಬೃಹತ್ ಶೋಭಾಯಾತ್ರೆ...

ಜಕ್ರಿಬೆಟ್ಟು : ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 13.5. ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಗೇಟ್ ಹಾಕಿ ನೀರು...

ಅಮ್ಮುoಜೆ : ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ..

ಬಂಟ್ವಾಳ : ಅಮ್ಮುoಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ನಡೆಯಿತು. ಜ.25ರಂದು ಭಾನುವಾರ ಬಲಿ ಉತ್ಸವ ನಡೆಯಿತು. ಶ್ರೀಕ್ಷೇತ್ರ ಪೊಳಲಿಯ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಳದ ಅರ್ಚಕ ನರೇಂದ್ರ ಭಟ್,...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...