ಬಂಟ್ವಾಳ: ನಕಲಿ ಮತದಾನ ಮಾಡಲು ಯತ್ನಿಸುವ ವೇಳೆ ವ್ಯಕ್ತಿಯೋರ್ವನು ಕರ್ತವ್ಯ ನಿರತ ಪೋಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಕಲ್ಲಡ್ಕ ದಲ್ಲಿ ನಡೆದಿದೆ.
ಕಲ್ಲಡ್ಕ ಪೇಟೆಯಲ್ಲಿ ರುವ ಪಂಚಾಯತ್ ಕಟ್ಟಡ ದಲ್ಲಿ ನಡೆಯುವ ನೆಟ್ಲ 177 ಬೂತ್ ಸಂಖ್ಯೆ ಯ ಕೊಠಡಿಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿ ಪೋಲಿಸ್ ರ ಅತಿಥಿಯಾಗಿ ದ್ಧಾನೆ.
ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡಲು ಈತ ಮತದಾನ ಕೇಂದ್ರ ಕ್ಕೆ ಬಂದಿದ್ದ.
ಸಂಶಯಗೊಂಡ ಅಧಿಕಾರಿಗಳು ಈತನನ್ನು ವಿಚಾರಣೆ ನಡೆಸಿದಾಗ ಈತ ಎರಡನೇ ಬಾರಿ ಮತದಾನ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಈತನ ನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಠಾಣೆಯಲ್ಲಿ ವಿಚಾರಣೆಯ ಬಳಿಕ ಇನ್ಮಷ್ಟುಮಾಹಿತಿ ಲಭ್ಯವಾಗಲಿದೆ
