ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ವಿದ್ಯಾಗಣಪತಿ ದೇವರ ವಿಗ್ರಹವನ್ನು ನಾರಾವಿಯ ಕುತ್ಲೂರಿನಿಂದ ವಾಹನ ಜಾಥಾದ ಮೂಲಕ ತಂದು ಕಲ್ಲಡ್ಕದ ಕೆ.ಸಿ.ರೋಡ್‌ನಿಂದ ವೈಭವದ ಮೆರವಣಿಗೆ ಮೂಲಕ ಪುರಪ್ರವೇಶ ಮಾಡಲಾಯಿತು.

ಕಲ್ಲಡ್ಕ ಶ್ರೀ ರಾಮ ಮಂದಿರ ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನೇತೃತ್ವ ವಹಿಸಿದ್ದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ನಾರಾಯಣ ಸೋಮಯಾಜಿ, ವಸಂತ ಮಾಧವ, ಕೃಷ್ಣಕುಮಾರ್ ಕಾಯರ್‌ಕಟ್ಟೆ, ಡಾ| ಕಮಲಾ ಪ್ರಭಾಕರ ಭಟ್, ನಾಗೇಶ್ ಕಲ್ಲಡ್ಕ, ಚೆನ್ನಪ್ಪ ಆರ್.ಕೋಟ್ಯಾನ್, ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಹಿರಣ್ಮಯಿ, ಮೋನಪ್ಪ ದೇವಸ್ಯ, ಬಿ.ಸಿ.ರೋಡಿನಲ್ಲಿ ರಾಜೇಶ್ ಎಲ್.ನಾಯಕ್, ರಮನಾಥ ರಾಯಿ, ಹರಿಪ್ರಸಾದ್, ಜಿನೇಂದ್ರ ಜೈನ್, ಅಜಿತ್ ಶೆಟ್ಟಿ, ಭಾಸ್ಕರ ಟೈಲರ್, ಪ್ರಣಾಮ್ ಅಜ್ಜಿಬೆಟ್ಟು ಮೊದಲಾದವರಿದ್ದರು.