ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬೆಂಜೆತ್ತಿಮಾರು ಪಾತ್ರೆಜಾಲು ನಾಗರತ್ನ ಎಂಬ ಬಡ ಮಹಿಳೆ ತಮ್ಮ ಹತ್ತಿರದ ಸಂಬಂದಿಕರ ಪರಸ್ಪರ ಹೊಂದಾಣಿಕೆಯ ಕೊರತೆಯಿಂದಾಗಿ ಹಳೆ ತಟ್ಟಿ ಗುಡಿಸಲಿನಲ್ಲಿ ಶೋಚನೀಯ ಸ್ಥಿತಿಯಲ್ಲಿ ವಾಸಿಸುವ ಮಾಹಿತಿ ತಿಳಿದ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌಯ೯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮಹಿಳೆಯ ಸಂಭಂಧಿಕರ ಮನವೋಲಿಸಿ ಹಳೆ ತಟ್ಟಿ ಮನೆಯಿಂದ ತೆರವುಗೊಳಿಸುವ ಮೂಲಕ ಹೊಸ ಮನೆಯಲ್ಲಿ ವಾಸಿಸುವಂತೆ ಬಿನ್ನವಿಸಿ ಈ ಮೂಲಕ ಮಾನವೀಯತೆ ಮೆರೆದರು, ನಂತರ ಮಹಿಳೆಯ ಮನೆಯ ಸುತ್ತ ಮುತ್ತ ಇದ್ದ ಗಲೀಜುಗಳನ್ನು ತೆರವುಗೊಳಿಸಿ. ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ದೇವಿಪ್ರಶಾದ್ ಶೆಟ್ಟಿ, ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅದ್ಯಕ್ಷರಾದ ತುಳಸಿ ಕೊಳಕೀರು, ಕೆಲಿಂಜ ಒಕ್ಕೂಟದ ಅಧ್ಯಕ್ಷರಾದ ದಯಾನಂದ್, ಶೌರ್ಯ ವಿಪತು ನಿರ್ವಹಣ ತಂಡದ ಕಲ್ಲಡ್ಕ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್,ಸಂಯೋಜಕಿ ವಿದ್ಯಾ ಕಲ್ಲಡ್ಕ, ಕೆಲಿಂಜ ಒಕ್ಕೂಟ ಸೇವಾಪ್ರತಿನಿಧಿ ರೇಣುಕಾ, ಕಲ್ಲಡ್ಕ ಒಕ್ಕೂಟ ಸೇವಾಪ್ರತಿನಿಧಿ ಗಣೇಶ್,ಶೌರ್ಯ ತಂಡದ ಸದಸ್ಯರುಗಳಾದ ರಮೇಶ್ ಕುದ್ರೆಬೆಟ್ಟು,ಸತೀಶ್ ಕುಧ್ರೆಬೆಟ್ಟು, ಸಂತೋಷ್ ಕುಮಾರ್ ಬೊಲ್ಪೊಡಿ , ಚಂದಪ್ಪ ಕುಲಾಲ್ , ವೆಂಕಪ್ಪ ಕುಲಾಲ್ , ಶೇಕ್ ಸಾಬಿರ್ , ಮಕ್ಬೂಲ್ ಖಾನ್ , ನಾಗೇಶ್ ,ವೆಂಕಪ್ಪ, ಮೌರಿಶ್, ಧನಂಜಯ ಕಾರ್ಯದಲ್ಲಿ ಭಾಗವಹಿಸಿದ್ದರು.