ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನೂರು ವರ್ಷಗಳಿಂದ ಭಜನೆ ನಡೆಯುತ್ತಿದ್ದು, ಹೀಗಾಗಿ ಇಲ್ಲಿ ರಾಮನ, ಹನುಮಂತನ ಸಾನಿಧ್ಯ ಇರುವುದು ಸತ್ಯ. ಎತ್ತರದಲ್ಲಿರುವ ಮಂದಿರದಲ್ಲಿ ಶ್ರೀರಾಮನ ಪಾದದ ಬುಡದಲ್ಲಿ ಕಲ್ಲಡ್ಕ ಪೇಟೆ ಇದ್ದು, ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ಸೂರ್ಯನ ರೀತಿಯಲ್ಲಿ ಹಿಂದೂ ಸಮಾಜವನ್ನು ಬೆಳಗಿಸುವ ಕಾರ್ಯ ಮಾಡಿದ್ದಾರೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಅವರು ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮದಲ್ಲಿ 13 ಕೋಟಿ ರಾಮನಾಮ ತಾರಕ ಜಪಯಜ್ಞದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತಿಗೆ ಭಾರತ ದೇವರ ಕೋಣೆಯಾಗಿದೆ ಎಂದರು.
ಶತಾಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಹಿರಿಯ ಸಾಧಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಎಂ.ವಸಂತ ರಾವ್, ಕೊರಗಪ್ಪ ಬಂಗೇರ, ನಳಿನಿ ಪ್ರದೀಪ್ ರಾವ್, ಚಿದಾನಂದ ಆಚಾರ್ಯ ಕಲ್ಲಡ್ಕ, ಕೆ.ಕೊರಗಪ್ಪ ಕೊಟ್ಟಾರಿ ಕೊಳಕೀರು, ರಮೇಶ್ ಆಚಾರ್ಯ ಕಲ್ಲಡ್ಕ, ಡೊಂಬಯ್ಯ ಟೈಲರ್ ಕಲ್ಲಡ್ಕ, ತಾರಾನಾಥ ಬಂಗೇರ, ವಿಠಲ ಪ್ರಭು ಮತ್ತಾರು, ಸತೀಶ್ ಆಚಾರ್ ಕಲ್ಲಡ್ಕ, ಎನ್.ಶಿವರಾಮ ಹೊಳ್ಳ, ವೀರಪ್ಪ ಮೂಲ್ಯ ಕಲ್ಲಡ್ಕ, ಶ್ರೀಧರ ಶೆಟ್ಟಿ ಬೊಂಡಾಲ, ಶಂಕರ ಐತಾಳ್, ಕೂಸ ಸಪಲ್ಯ ನರಹರಿನಗರ, ಶ್ರೀನಿಧಿ ಆರ್, ಸರಸ್ವತಿ ನಾಗೇಶ್ ನಿಟಿಲಾಪುರ, ಜಗನ್ನಾಥ ಬಂಗೇರ ನಿರ್ಮಾಲ್, ರಶ್ಮಿತಾ ಯುವರಾಜ್ ಜೈನ್, ಚಂದ್ರಶೇಖರ ಆಚಾರ್ಯ ರಾಮನಗರ, ನಾಗೇಶ್ ಕಲ್ಲಡ್ಕ, ವಸಂತ ಮಾಧವ, ರಮೇಶ್ ಎನ್.ಅಮ್ಟೂರು, ಚಿ.ರಮೇಶ್ ಕಲ್ಲಡ್ಕ, ಎನ್.ರಾಜೇಂದ್ರ ಹೊಳ್ಳ, ರುಕ್ಮಯ ಕೊಳಕೀರು, ಶಾರದಾ ಜಿ. ಅವರು ಗ್ರಾಮ ಸಮ್ಮಾನ್ ಸ್ವೀಕರಿಸಿದರು.
ಶತಾಬ್ದಿ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಹೈಕೋರ್ಟ್ ನ್ಯಾಯವಾದಿ ಅರುಣ್‌ಶ್ಯಾಮ್, ಉದ್ಯಮಿ ರಘುನಾಥ ಸೋಮಯಾಜಿ, ಹವ್ಯಕ ಮಹಾಮಂಡಲದ ಹರಿಪ್ರಸಾದ್ ಪೆರ್ಯಾಪು, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೋಟ್ಯಾಡಿ ಮೊದಲಾದ ಪ್ರಮುಖರು ಭೇಟಿ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಕಲ್ಲಡ್ಕ, ಚೆನ್ನಪ್ಪ ಆರ್.ಕೋಟ್ಯಾನ್, ಸುಜಿತ್ ಕೊಟ್ಟಾರಿ ಮೊದಲಾದವರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕ.ಕೃಷ್ಣಪ್ಪ ಕಲ್ಲಡ್ಕ ವಂದಿಸಿದರು. ವೇದಿಕೆ ಸಮಿತಿಯ ಉಪಾಧ್ಯಕ್ಷ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.