Sunday, February 9, 2025

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜು ವಿಠೋಬ ವಿಠಲ 2019  ನೃತ್ಯ ಭಜನಾ ಸ್ಪರ್ಧೆ- ಸಮಾರೋಪ

ಬಂಟ್ವಾಳ: ವೈಜ್ಞಾನಿಕವಾಗಿ ನಾವು ಎಷ್ಟೇ ಬೆಳವಣಿಗೆ ಕಂಡರೂ ಅದು ನಮ್ಮ ಮೂಲ ಚಿಂತನೆಗೆ ತೊಡಕಾಗಬಾರದು. ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪದ್ಧತಿ, ಆಚಾರ-ವಿಚಾರ, ಸಂಸ್ಕೃತಿ, ಮುಂತಾದುವುಗಳ ಮೌಲ್ಯ ಎಂದಿಗೂ ನಶಿಸಿಹೋಗುವಂಥದಲ್ಲ. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹ ಕೇವಲ ಕ್ಷಣಿಕವಾಗಿರುವುದೇ ಹೊರತು, ಭಕ್ತಿ-ಭಾವನೆ ಬೆಳೆಸುವಂಥದ್ದಲ್ಲ ಎಂದು ವಿವೇಕಾನಂದ ಬಿಎಡ್ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜು ವಿಠೋಬ ವಿಠಲ 2019 ನೃತ್ಯ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಾಗಿ ಆಗಮಿಸಿ ಹೀಗೆಂದರು. ಎಲ್ಲಿ ಭಕ್ತಿ ಶ್ರದ್ಧೆಯಿಂದ ಭಗವಂತನನ್ನು ಹಾಡಿ ಕುಣಿಯುತ್ತಾರೋ ಅಲ್ಲಿ ಭಗವಂತನು ವಾಸವಾಗಿರುತ್ತಾನೆ. ಮೊಬೈಲನ್ನು ಜೀವನದ ಅವಿಭಾಜ್ಯ ಅಂಗವಾಗಿ ಬಳಸಿಕೊಂಡಿರುವ ಇಂದಿನ ಕಾಲಘಟ್ಟದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ನಮ್ಮ ಸಂಸ್ಕೃತಿ ಯುವಪೀಳಿಗೆಗೆ ತಲುಪುತ್ತಿರುವುದು ಸಾಕ್ಷಿಯಾಗಿದೆ ಮತ್ತು ಇದಕ್ಕೆ ಪೂರಕವಾದ ಕಾರ್ಯ ಈ ವಿದ್ಯಾಸಂಸ್ಥೆಯಲ್ಲಿ ನಡೆದಿದೆ ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನೃತ್ಯ ಭಜನೆ ಸಂಸ್ಕೃತಿಯನ್ನು ಪೋಷಿಸುವಂತಹ ಒಂದು ಅದ್ಭುತವಾದ ಕಾರ್ಯ. ನಮ್ಮ ಶರೀರ ಮನಸ್ಸು ಬುದ್ಧಿ ಅದೆಲ್ಲವೂ ಒಳ್ಳೆಯ ಚಿಂತನೆಯ ಕಡೆಗೆ ಹೋಗಬೇಕು. ಭಾವನೆಗಳನ್ನು ಅರಳಿಸುವ, ಧರ್ಮ ಜಾಗೃತಿ ಮತ್ತು ಸಂಸ್ಕೃತಿಯನ್ನು ಉಳಿಸುವಂತ ವಿಶಿಷ್ಟವಾದ ಶಕ್ತಿ ನೃತ್ಯ ಭಜನೆಯಲ್ಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹುಮಾನ ಅವಶ್ಯಕ, ಆದರೆ ನೃತ್ಯ ಭಜನೆ ಬಹುಮಾನದ ಸ್ಪರ್ಧೆಯಾಗಿ ಮಾತ್ರ ಉಳಿಯದೆ ನಮ್ಮ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಂಥ ಕಾರ್ಯಕ್ರಮವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಡಾ| ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಒಟ್ಟು 11 ಕಾಲೇಜುಗಳಿಂದ 11 ತಂಡ ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಗೋವಿಂದ ದಾಸ ಕಾಲೇಜು ಸುರತ್ಕಲ್, ದ್ವಿತೀಯ ಸ್ಥಾನವನ್ನು ರಾಮಕೃಷ್ಣ ಕಾಲೇಜು ಮಂಗಳೂರು, ತೃತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು ಪಡೆದುಕೊಂಡಿತು.
ತೀರ್ಪುಗಾರರಾಗಿ ರಂಗಭೂಮಿ ಕಲಾವಿದ, ಅಂಕಣಕಾರ ಮೌನೇಶ್ ವಿಶ್ವಕರ್ಮ, ವಿವೇಕಾನಂದ ಬಿಎಡ್ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್, ಯೋಗೀಶ್ ಶಂಭೂರು, ಪ್ರಶಾಂತ್ ನರಿಕೊಂಬು ಆಗಮಿಸಿದ್ದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಅತಿಥಿಗಳನ್ನು ವಿದ್ಯಾರ್ಥಿಗಳಾದ ಅನುಷಾ ಸ್ವಾಗತಿಸಿ, ಅಖಿಲಾ ವಂದಿಸಿ, ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...