Wednesday, February 4, 2026

ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಸದಸ್ಯರಿಗೆ ನೆರವಿನ ಪ್ರೋತ್ಸಾಹ

 ಕಲ್ಲಡ್ಕ: ವಿಶ್ವವೇ ಕೊರೋನ ವೈರಸ್ ನ ಹಾವಳಿಯಿಂದ ತತ್ತರಿಸಿರುವ ಈ ಸಮಯದಲ್ಲಿ, ನಮ್ಮ ದೇಶದಲ್ಲಿ ಈ ವೈರಸ್ ನಿಯಂತ್ರಣಕ್ಕೆ ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿಯ ಕರೆಯಂತೆ 2ಹಂತದಲ್ಲಿ ಲಾಕ್ ಡೌನ್ ಹೇರಿ ಈ ವೈರಸ್ ನ ಹಾವಳಿಯಿಂದ ದೇಶದ ಜನರನ್ನು ರಕ್ಷಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಲಾಕ್ ಡೌನ್ನಿಂದ ಜನರಿಗೆ ಉದ್ಯೋಗಕ್ಕೆ, ದಿನನಿತ್ಯದ ಆಹಾರಕ್ಕೂ ಸಮಸ್ಯೆಯಾಗಿದೆ. ಇದನ್ನು ಮನಗಂಡ ಸಂಘ ತನ್ನ ಸದಸ್ಯರಿಗೆ ಕಳೆದ ವಾರ್ಷಿಕ ವರ್ಷದಲ್ಲಿ ಸಂಘಕ್ಕೆ ಹಾಲು ಹಾಕಿ ಪ್ರೋತ್ಸಾಹಿಸಿದ ತನ್ನ 201 ಸದಸ್ಯರಿಗೆ ಪ್ರತಿ ಲೀಟರ್‍ ಹಾಲಿಗೆ 0.75 ಪೈಸೆಯಂತೆ ಒಟ್ಟು 2,57,958 ರೂಪಾಯಿಯನ್ನು ಹಂಚಿಕೆ ಮಾಡಿ, 1000ಕ್ಕಿಂತ ಹೆಚ್ಚು ಪ್ರೋತ್ಸಾಹ ಧನ ಪಡೆದ ಸದಸ್ಯರಿಗೆ 25 ಕೆಜಿ ಅಕ್ಕಿ ಮತ್ತು ಉಳಿದ ಸದಸ್ಯರಿಗೆ 10ಅಕ್ಕಿ ವಿತರಿಸಿ ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ಸದಸ್ಯರಿಗೆ ಬೆಂಬಲ ನೀಡಿ ಸಮಾಜಕ್ಕೆ ಮಾದರಿಯಾಗಿದೆ. ಹಾಗೆಯೇ ಮುಖ್ಯಮಂತ್ರಿ ಪರಿಹಾರ ನಿಧಿಗೆ 5000ರುಪಾಯಿಯನ್ನು ಒಕ್ಕೂಟತದ ಮೂಲಕ ನೀಡಲಾಯಿತು.

ಸಂಘದ ಕಛೇರಿಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅಕ್ಕಿ ವಿತರಿಸಿದರು. ಪ್ರೋತ್ಸಾಹಧನವನ್ನು ಸದಸ್ಯರ ಖಾತೆಗೆ ಜಮಾಯಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಮ್.ಫ್ ನಿರ್ದೇಶಕ ಸುಧಾಕರ್ ರೈ ಬೋಳಂತೂರು, ಕೆ.ಎಮ್.ಫ್ ಉಪ ವ್ಯವಸ್ಥಾಪಕ ಪ್ರಭಾಕರ್., ವಿಸ್ತರಣಾಧಿಕಾರಿಗಳಾದ ದೇವರಾಜ್ ಮತ್ತು ಜಗಧೀಶ್ ಉಪಸ್ಥಿತರಿದ್ದರು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...