ಬಂಟ್ವಾಳ: ಶ್ರೀರಾಮ ಪದವಿ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರಬೋಸ್‌ರವರ ಜನ್ಮದಿನಾಚರಣೆ ಆಚರಿಸಲಾಯಿತು. ಅಂತಿಮ ಬಿಎ ತರಗತಿಯ ವಿದ್ಯಾರ್ಥಿಯಾದ ಹರೀಶ್ ಇವರು ನೇತಾಜಿ ನಡೆದು ಬಂದ ಹಾದಿಯನ್ನು ದೇಶಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು. ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಮತ್ತು ಮಾನವಿಕ ಸಂಘದ ನಿರ್ದೇಶಕಿಯಾದ ಜಯಲಕ್ಷ್ಮೀ ಉಪಸ್ಥಿತರಿದ್ದರು. ದ್ವಿತೀಯ ಬಿಎ ವಿದ್ಯಾರ್ಥಿಯಾದ ವರ್ಷಿಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಿಶಾ ವಂದಿಸಿದರು.


