Friday, January 30, 2026

ಕಲ್ಲಡ್ಕ: ವೇದವ್ಯಾಸ ಧ್ಯಾನಮಂದಿರದಲ್ಲಿ ಕೈತುತ್ತು ಕಾರ್ಯಕ್ರಮ

ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೈತುತ್ತು ಕಾರ್ಯಕ್ರಮವು ಜರುಗಿತು.
ತಾಯಿ ಮತ್ತು ಮಗುವಿನ ಬಾಂಧ್ಯವವನ್ನು ಹೆಚ್ಚಿಸುವ ಈ ಕಾರ್ಯಕ್ರಮದಲ್ಲಿ 1 ಮತ್ತು 2ನೇ ತರಗತಿಯ ಮಕ್ಕಳ ತಾಯಂದಿರು ಭಾಗವಹಿಸಿ, ತಮ್ಮ ಮಗುವಿಗೆ ಮಾತ್ರ ಕೈತುತ್ತು ನೀಡದೆ ಬೇರೆ ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ತಮ್ಮ ಮಗುವಿನ ಜೊತೆ ಇರುವ ಬಾಂಧವ್ಯದ ಜೊತೆಗೆ ಇತರ ಮಗುವಿನ ಜೊತೆ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮವು ಸಾಕ್ಷಿಯಾಯಿತು. ಕಥೆ, ಹಾಡು ಹೇಳುತ್ತಾ , ಕುಶಲೋಪಾಚಾರಿ ವಿಚಾರಿಸುತ್ತಾ ಕೈತುತ್ತು ನೀಡಿದರು.


ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ರೇಷ್ಮಾ ಹಾಗೂ ಗಾಯತ್ರಿ ತಾಯಿಯ ವಿಶೇಷತೆಯನ್ನು ಸಾರುವ ಹಾಡುಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ಡಾ|| ಕಮಲಾ ಪ್ರಭಾಕರ್ ಭಟ್ , ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.

More from the blog

ಜ.31ರಂದು ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮವು ಜ.31ರಂದು ಪ್ರಾಂತೀಯ ಅಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಿ. ಇವರ ಅಧ್ಯಕ್ಷತೆಯಲ್ಲಿ ಜ.31ರಂದು ಬಜಾರ್ ಆಡಿಟೋರಿಯಂ ಕಂದೂರು ಸಜಿಪಮೂಡದಲ್ಲಿ ನಡೆಯಲಿದೆ ಎಂದು ಸಮ್ಮೇಳನ...

ಕಟೀಲು 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.30ರ ಸೇವೆಯಾಟಗಳ ವಿವರ : ವಾಸು ಶೆಟ್ಟಿ, 'ಶ್ರೀದೇವಿ ಕೃಪಾ, 7ನೇ...

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...