ಕಲ್ಲಡ್ಕ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಮತ್ತು ಗ್ರಾಮ ವಿಕಾಸ ಸಮಿತಿ ಗೋಳ್ತಮಜಲು ಇದರ ವತಿಯಿಂದ ಗೋಳ್ತಮಜಲು ಮತ್ತು ವೀರಕಂಭಗ್ರಾಮದ 50 ಮನೆಗಳಲ್ಲಿ 65 ಗಿಡಗಳನ್ನು ವಿದ್ಯಾರ್ಥಿಗಳು ಪೋಷಕರೊಂದಿಗೆ ನೆಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ಗೋಳ್ತಮಜಲು ಮಂಡಲ ಗ್ರಾಮವಿಕಾಸ ಪ್ರಮುಖರು ಶ್ರೀರಾಮ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಪುರುಷೋತ್ತಮ ಹಾಗೂ ಕಲಾ ಶಿಕ್ಷಕರಾದ ಜಿನ್ನಪ್ಪ ಮತ್ತು ಸಂಯೋಜಕರು ಶ್ರೀರಾಮ ಪ್ರೌಢಶಾಲಾ ಸಹ ಶಿಕ್ಷಕರಾದ ಗೋಪಾಲ್‌ಇವರು ಉಪಸ್ಥಿತರಿದ್ದರು.