ಬಂಟ್ವಾಳ: ರಾಜ್ಯದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಮಾಡಲಿರುವ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ತೆರಳಿ ಶುಭಾಶಯ ಕೋರಿದ್ದಾರೆ.
12.50 ರ ಇಂಡಿಗೋ ವಿಮಾನದ ಮೂಲಕ ಬೆಂಗಳೂರು ತೆರಳಿದ ಕಲ್ಲಡ್ಕದ ಹಿರಿಯ ಆರ್.ಎಸ್.ಎಸ್.ಪ್ರಮುಖ ಡಾ ಭಟ್ ಅವರು ನೇರವಾಗಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದಾರೆ.
ಪ್ರಸ್ತುತ ದಕ್ಷಿಣ ಮಧ್ಯಕ್ಷೇತ್ರ ಕಾರ್ಯಕಾರಿಣಿ ಸದಸ್ಯ ರಾಗಿರುವ ಡಾ| ಭಟ್ ಅವರು ಬಿ.ಎಸ್.ಅವರ ಆತ್ಮೀಯ ಸ್ನೇಹಿತ.
ಇಂದು ಬೆಳಿಗ್ಗೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರು ಪೋನ್ ಮೂಲಕ ಸಂಪರ್ಕ ಮಾಡಿ ಸಂಜೆ 6.30 ರ ವೇಳೆ ರಾಜ್ಯದ 4 ನೇ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದನಾಗಿರುವ ಶುಭಶುಕ್ರವಾರದ ಅ ಸಂತಸದ ಕ್ಷಣದಲ್ಲಿ ಪಾಲು ಪಡೆಯುವಂತೆ ಕೋರಿದ್ದರು.
ಹಾಗಾಗಿ ಡಾ ಭಟ್ ಅವರು ಮಧ್ಯಾಹ್ನ ದ ವೇಳೆ ಬೆಂಗಳೂರು ತಲುಪಿದ್ದು ಯಡಿಯೂರಪ್ಪ ಅವರ ಮನೆಗೆ ತೆರಳಿದ್ದಾರೆ, ಹಾಗೂ ಸಂಜೆ ವೇಳೆ ನಡೆಯುವ ಪ್ರಮಾಣವಚನ ದ ಸಂದರ್ಭದಲ್ಲಿ ಯೂ ಉಪಸ್ಥಿತರಿರುವರು.


ಬಾಲ್ಯ ಸ್ನೇಹಿತರು:
ಡಾ| ಭಟ್ ಹಾಗೂ ಬಿ.ಎಸ್.ವೈ ಅವರು ಬಾಲ್ಯದ ದಿನದಿಂದಲೂ ಆತ್ಮೀಯ ಸ್ನೇಹಿತರಾಗಿದ್ದರು. ಸುಮಾರು 50 ವರ್ಷಗಳಿಂತಲೂ ಅಧಿಕವಾಗಿ ಇವರು ಸಂಘದ ಮೂಲಕ ಸ್ನೇಹ ಸಂಬಂಧ ಹೊಂದಿದ್ದಾರೆ.
ಬಿ.ಎಸ್.ವೈ ಅವರು ಆರಂಭದಲ್ಲಿ ಶಿವಮೊಗ್ಗ ತಾಲೂಕು ಕಾರ್ಯವಾಹ ವಾಗಿದ್ದ ಸಂದರ್ಭದಲ್ಲಿ ಡಾ| ಭಟ್ ಅವರು ಪುತ್ತೂರು ಕಾರ್ಯವಾಹವಾಗಿದ್ದರು ಅಬಳಿಕ ಸಂಘ ದ ಮೂಲಕ ಅನೇಕ ಜವಬ್ದಾರಿ ಗಳ ಮೂಲಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಮಾಡುತ್ತಾ ಬಂದಿದ್ದಾರೆ.
ಬಿ.ಎಸ್.ವೈ ಅವರು ಈ ಹಿಂದೆ 3 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರುಬಾರು ಮಾಡಿದ್ದರೆ, ಡಾ| ಭಟ್ ಅವರು ಕಲ್ಲಡ್ಕ ದಿಂದಲೇ ಸರಕಾರದ ರಿಮೋಟ್ ಕಂಟ್ರೋಲ್ ಮೂಲಕ ಗಮನ ಸೆಳೆದ ವರು.
ತುರ್ತುಪರಿಸ್ಥಿತಿ ಯಲ್ಲೂ ಒಟ್ಟಿಗೆ:
ಈ ದೇಶದಲ್ಲಿ ತುರ್ತುಸ್ಥಿತಿ ಉಂಟಾದ ವೇಳೆ ಯಲ್ಲಿ ಯೂ ಬಿ.ಎಸ್.ವೈ ಮತ್ತು ಡಾ| ಭಟ್ ಅವರು ಜೊತೆ ಯಾಗಿದ್ದವರು.
ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಕ್ರೀಡೋತ್ಸವದಲ್ಲೂ ಬಿ.ಎಸ್.ವೈ ಭಾಗಿಯಾಗಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಎರಡು ಬಾರಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಬೇಟಿ ನೀಡಿದ್ದರು.
ಎರಡು ಬಾರಿಯೂ ಹೆಲಿಪ್ಯಾಡ್ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಅಂಗಳದಲ್ಲಿ ಲ್ಯಾಂಡ್ ಅಗಿದ್ದು ವಿಶೇಷ.
ಡಾ| ಭಟ್ ಅವರ ನೇತೃತ್ವದಲ್ಲಿ ನಡೆದ ರಾಮನಾಮತಾರಕ ಯಜ್ಞ ಕಾರ್ಯಕ್ರಮ ದಲ್ಲೂ ಬಿ.ಎಸ್.ವೈ ಭಾಗಿಯಾಗಿದ್ದರು.
ಇತ್ತೀಚಿಗೆ ಶ್ರೀ ರಾಮ ಭಜನಾ ಮಂದಿರದ ಉದ್ಘಾಟನೆ ಯ ವೇಳೆಯೂ ಅಗಮಸಿ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ್ದಾರೆ.
ಡಾ!ಭಟ್ ಅವರು ಕರೆದ ಬಹುತೇಕ ಎಲ್ಲಾ ಪ್ರಮುಖ ಕಾರ್ಯಕ್ರಮ ದಲ್ಲಿ ಭಾಗಿ ಯಾಗಿ ಇವರ ಸ್ನೇಹ ಕ್ಕೆ ಬೆಲೆ ನೀಡಿದವರು ಬಿ.ಎಸ್.ವೈ.
ಅವರು ಇಂದು 4 ನೇ ಬಾರಿ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದು ಸಂತಸ ತಂದಿದೆ ಎಂದು ಡಾ| ಭಟ್ ತಿಳಿಸಿದ್ದಾರೆ.
ಬಿ.ಎಸ್.ವೈ ಧೀಮಂತ ನಾಯಕ, ಜಿಲ್ಲೆ ಯ ಅಭಿವೃದ್ಧಿಯ ಮೇಲೆ ವಿಶೇಷ ಗಮನ ಹರಿಸುತ್ತಾರೆ ಎಂಬ ಅಚಲವಾದ ನಿರೀಕ್ಷೆ ಇದೆ.
ಜನರು ಅವರು ಮೇಲೆ ಇಟ್ಟಿರುವ ನಿರೀಕ್ಷೆ ಸುಳ್ಳಾಗದ ರೀತಿಯಲ್ಲಿ ಆಡಳಿತ ನಡೆಸುತ್ತಾರೆ ಎಂದು ಡಾ| ಭಟ್ ವಿಶ್ವಾಸ ವ್ಯಕ್ತಪಡಿಸಿದರು.