ಬಂಟ್ವಾಳ: ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಉದ್ಘಾಟನೆ ಹಾಗೂ 2019-20ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಆಗತ-ಸ್ವಾಗತ ಜೂ.27ನೇ ಗುರುವಾರದಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ಬೆಂಗಳೂರಿನ ಉದ್ಯಮಿ ಪ್ರಕಾಶ್ ಭಟ್, NMPT ಮಂಗಳೂರು ಇದರ ಚೇರ್‌ಮೆನ್ ಎ.ವಿ.ರಮಣ, ಮುಂಬಯಿಯ ಉದ್ಯಮಿ ಕುಸುಮಾಧರ ಡಿ. ಶೆಟ್ಟಿ, ಕ್ರಿಸ್ಟಲ್‌ಪಾರ್ಕ್ ಸಿನೆಮಾಸ್ ಚಲನಚಿತ್ರ ನಿರ್ಮಾಪಕ ಟಿ.ಆರ್. ಚಂದ್ರಶೇಖರ್, ಕುಡಚಿ ಬೆಳಗಾವಿ ಶಾಸಕ ಪಿ. ರಾಜೀವ, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಸ್ಥೆಯ ಸಂಚಾಲಕ ಶ್ರೀ ವಸಂತ ಮಾಧವ, ಉಪಸ್ಥಿತರಿರುವರು ಹಾಗೂ ಪದವಿ ವಿಭಾಗಕ್ಕೆ ನೂತನವಾಗಿ ದಾಖಲೆಗೊಂಡ 140ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರವೇಶೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
