Monday, January 26, 2026

ಕಲ್ಲಡ್ಕದ “ಕುಟುಂಬ” ಹಾಗೂ ಬಂಟ್ವಾಳದ ಎಸ್.ಐ.ಅವರಿಂದ ಧರ್ಣಮ್ಮ ಅಜ್ಜಿಗೆ ಮನೆ ನಿರ್ಮಾಣ, ಹಸ್ತಾಂತರ

ಬಂಟ್ವಾಳ: ಕಲ್ಲಡ್ಕ ಸಮೀಪದ ನೆಟ್ಲ ಬಳಿಯ ಪಿಲಿಂಜ ನಿವಾಸಿ 65 ವರ್ಷದ ವೃದ್ದೆ ಧರ್ಣಮ್ಮ ಅವರಿಗೆ ಕಲ್ಲಡ್ಕ ದ ನೆಟ್ಲ ಪರಿಸರದ ” ಕುಟುಂಬ ” ಸದಸ್ಯರ ಸಹಕಾರ ಹಾಗೂ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರ ಮುತುವರ್ಜಿಯಿಂದ ನಿರ್ಮಿಸಿ ಕೊಟ್ಟ ನೂತನ ಮನೆಯ ಹಸ್ತಾಂತರ ಇಂದು ನಡೆಯಿತು.

ಮನೆಯವರೆಲ್ಲರನ್ನು ಕಳೆದುಕೊಂಡು ದಿಕ್ಕುತೋಚದ ಸ್ಥಿತಿಯಲ್ಲಿ ದ್ದ ಧರ್ಣಮ್ಮ ಅಜ್ಜಿಯ ಮನೆ ಬೀಳುವ ಹಂತದಲ್ಲಿ ತ್ತು.
ಇಂತಹ ಶೋಚನೀಯ ಜೀವನವನ್ನು ಅರಿತ ಇಲ್ಲಿನ ” ಕುಟುಂಬ ” ಸದಸ್ಯರು ಇವರಿಗೆ ಮನೆ ನಿರ್ಮಾಣ ಮಾಡಿಕೊಡುವ ಪಣತೊಟ್ಟರು.
ಇದಕ್ಕೆ ಸಾಥ್ ನೀಡಿದವರು ಬಂಟ್ವಾಳ ಎಸ್.ಐ.ಚಂದ್ರಶೇಖರ್.

ಅಂತೂ ಇಂತು ಮನೆ ನಿರ್ಮಾಣ ಗೊಂಡಿತ್ತು. ಇಂದು ಮನೆಯ ಹಸ್ತಾಂತರವೂ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ಸಾಂಕೇತಿಕ ವಾಗಿ ಎಲ್ಲಾ ಕಾರ್ಯಕ್ರಮ ಗಳು ನಡೆಯಿತು. ಕಲ್ಲಡ್ಕದ ” ಕುಟುಂಬ ” ಸದಸ್ಯರು ಕೈಗೆತ್ತಿಕೊಂಡ ಉತ್ತಮ ಕಾರ್ಯಕ್ಕೆ ಎಲ್ಲರ ಬಾಯಿಯಿಂದಲೂ ಮೆಚ್ಚಗೆಯ ಮಾತುಗಳು ಕೇಳಿಬಂದಿವೆ.

More from the blog

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು – ವಜ್ರದೇಹಿ ಶ್ರೀ

ವಿಟ್ಲ: ಹಿಂದು ಸಮಾಜ ಪ್ರಸಕ್ತ ಪರಿಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಜಾತಿ ಸಮುದಾಯಗಳು ಒಟ್ಟಾಗಿ ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು. ಹೀಗಾದಾಗ ಮಾತ್ರ ರಾಜಕೀಯ ಷಡ್ಯಂತ್ರಗಳನ್ನು ಮೆಟ್ಟಿ ಮುನ್ನಡೆಯ...