ಬಂಟ್ವಾಳ: ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕ್ಲೀನ್ ಮಾಡಲು ಸೈ ಎಂದು ತೋರಿಸಿದ ಬಂಟ್ವಾಳ ಟ್ರಾಫಿಕ್ ಎ.ಎಸ್. ಐ.ವಿಜಯ ಕುಮಾರ್ ತಂಡ.



ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ದೂಳು ಕೆಸರಿನಿಂದ ಕೂಡಿದ್ದ ಕಲ್ಲಡ್ಕ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ನೀರು ಹಾಕಿ ತೊಳೆಯುವ ಪೋಲೀಸರ ತಂಡ.
ಕಲ್ಲಡ್ಕದ ಸಿ.ಟಿ.ಯಲ್ಲಿರುವ ಬಸ್ ನಿಲ್ದಾಣ ಇತ್ತೀಚೆಗೆ ದೂಳು ಹಾಗೂ ಕೆಸರಿನಿಂದ ಕೂಡಿದ್ದು,ಸಾರ್ವಜನಿಕ ರು ಬಸ್ ನಿಲ್ದಾಣದೊಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಅದನ್ನು ಮನಗಂಡು ಟ್ರಾಫಿಕ್ ಎಎಸ್ಐ ವಿಜಯ ಕುಮಾರ್ ಅವರ ನೇತೃತ್ವದ ಎ.ಎಸ್.ಐ.ದೇವಪ್ಪ, ಹಾಗೂ ಕೆ.ಎಸ್.ಆರ್.ಪಿ.ತಂಡ ಪ್ರತಿ ವಾರಕ್ಕೊಮ್ಮೆ ಕ್ಲೀನಿಂಗ್ ಮಾಡುತ್ತಿದ್ದಾರೆ.ಪೋಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ವಚ್ಚತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಾದರೂ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಬೇಕಾದ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ, ಹಾಗಾಗಿ ಪೋಲೀಸ್ ತಂಡ , ಇತರ ಸಂಘ ಸಂಸ್ಥೆಗಳು ಸ್ವಚ್ಚತೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.












