ಕಲ್ಲಡ್ಕ : ಶ್ರೀರಾಮ ಪದವಿ ಕಾಲೇಜ್ ನಲ್ಲಿ 2021-2022ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.. ಶ್ರೀ ರಾಮಕೃಷ್ಣ ಪದವಿ ಕಾಲೇಜ್ ನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ನಟೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತಾಡಿದ ಅವರು ಅನುಭವವೇ ಜೀವನ, ರಾಷ್ಟ್ರೀಯ ಸೇವಾ ಯೋಜನೆ ಜೀವನ ಅನುಭವ ಕಲಿಸಿ ಕೊಡುತ್ತದೆ.ಅದುವೇ ಮಾನವತ್ವದೆಡೆಗೆ ಸಾಗುವಂತೆ ಮಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಕಲ್ಲಡ್ಕ ವಹಿಸಿದ್ದರು. ಪದವಿ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರಕಟ್ಟೆ, ಸಂಯೋಜನಾಧಿಕಾರಿ ಯತಿರಾಜ್ ಪೆರಾಜೆ, ಕು. ದೀಕ್ಷಿತಾ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾದ ಭಾಗ್ಯಶ್ರೀ ಸ್ವಾಗತಿಸಿ, ಕೀರ್ತಿ ವಂದಿಸಿ,ನವಿತಾ ಕಾರ್ಯಕ್ರಮ ನಿರೂಪಿಸಿದರು.

