Wednesday, July 9, 2025

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯವರ ದೀಪಪ್ರದಾನ ಕಾರ್ಯಕ್ರಮ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯವರ ದೀಪಪ್ರದಾನ ಕಾರ್‍ಯಕ್ರಮ ಮಾ.5 ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಕಾರ್‍ಯಕ್ರಮದಲ್ಲಿ ಪುಣೆಯ ಬಂಟ್ಸ್ ಸಂಘದ ಅಧ್ಯಕ್ಷರಾದ ಮುಖ್ಯಅತಿಥಿಯಾಗಿ ಸಂತೋಷ್ ಶೆಟ್ಟಿ ಮಾತನಾಡಿ ಜ್ಞಾನದ ಪರೀಕ್ಷೆಯಲ್ಲಿ ಜಯಶಾಲಿಯಾಗುವುದು ಮಾತ್ರ ಸಾಧನೆಯಲ್ಲ, ಜೀವನದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ನಿಜವಾದ ಸಾಧನೆ. ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಲಿತ ಮಕ್ಕಳು ತಮ್ಮಜೀವನದ ಯಾವುದೇ ಸಂದರ್ಭದಲ್ಲಿ ಬದುಕುವ ಸಾಮರ್ಥ್ಯವನ್ನು ಪಡೆದಿರುತ್ತಾರೆ ಎಂಬುದಕ್ಕೆ ಇಲ್ಲಿನ ಮಕ್ಕಳ ಕಾರ್ಯಚಟುವಟಿಕೆ ಸಂಸ್ಕಾರಯುತ ನಡವಳಿಕೆ ತಿಳಿಸುತ್ತದೆ. ಇಂಗ್ಲೀಷ್‌ ಮಯವಾದ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆ ಅಗಾಧ ಸಂಖ್ಯೆಯಲ್ಲಿ ಸಂಸ್ಕರಾಯುತ ಶಿಕ್ಷಣ ನೀಡುತ್ತಾ ರಾಷ್ಟ್ರದಾದ್ಯಂತ ಹೆಸರು ಮಾಡಿರುವುದು ಅದ್ಭುತವಾದುದು ಎಂದರು.


ಇವರು ಶ್ರೀರಾಮ ಪ್ರೌಢಾಶಾಲಾ ’ದೀಪಪ್ರದಾನ’ ಕಾರ್‍ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಾ ಶಾಲಾ ಮಕ್ಕಳನ್ನು ಬೀಳ್ಕೊಡುವ ಕಾರ್‍ಯಕ್ರಮವನ್ನು ದೀಪಪ್ರದಾನ ಎಂಬ ನಾಮಾಂಕಿತದೊಂದಿಗೆ ಅರ್ಥಪೂರ್ಣವಾದ ಪರಿಕಲ್ಪನೆ ಅದ್ಭುತವಾದುದು ಎಂದರು. ಹಿಂದೂ ಸ್ವಾರ್ಥಿಯಲ್ಲ ಇನ್ನೊಬ್ಬರ ಏಳಿಗೆಯಲ್ಲಿ ಬಯಸುವವನು, ಭಾರತಭೂಮಿಯ ಮಣ್ಣಿನಗುಣ ಭಾರತೀಯರಲ್ಲಿ ಸಂಸ್ಕಾರ, ಸಂಸ್ಕೃತಿ, ದೇಶಪ್ರೇಮ, ಆಂತರ್‍ಯದಲ್ಲೆ ಅಡಗಿರಲು ಕಾರಣವಾಗಿದೆ. ತಾನು ಬೆಳಗಿದ ದೀಪವನ್ನುಇನ್ನೊಬ್ಬರು ಬೆಳಗಿಸಿ ನಂದಾ ದೀಪವಾಗುವ ಸಂಕೇತವೇ ದೀಪ್ರದಾನ ಕಾರ್‍ಯಕ್ರಮ. ಈ ಉದ್ದೇಶ ಸಫಲವಾಗಬೇಕಾದರೆ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಭಾರತ ಕಂಡ ಮಹಾಪುರುಷರ ಸಾಲಿಗೆ ಸೇರಬೇಕು ಎಂದು ಪುತ್ತೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ||ಪ್ರಭಾಕರ ಭಟ್‌ರವರು ವಿದ್ಯಾರ್ಥಿಗಳಿಗೆ ಶುಭಾಶೀರ್ವಾದ ನೀಡಿದರು.
ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕಾರಯುತ ಶಿಕ್ಷಣ ಕಲಿತ ವಿದ್ಯಾರ್ಥಿಗಳ ಮುಂದೆ ಮಹಾನ್ ವ್ಯಕ್ತಿಗಳಾವುದು ಸತ್ಯ ಎಂದು ದಾವಣಗೆರೆಯ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರ್‌ರವರು ಹರ್ಷ ವ್ಯಕ್ತಪಡಿಸಿದರು.
ಪ್ರೌಢ ವಯಸಿನವರೆಗೆ ಕಲಿತ ಸಂಸ್ಕಾರಯುತ ಶಿಕ್ಷಣ, ಮೌಲ್ಯಗಳು ಗುರುವಂದನೆ ಮುದೊಂದು ದಿನ ಉತ್ತಮ ಮಟ್ಟಕ್ಕೆಕೊಂಡೊಯ್ಯುತ್ತದೆ. ಇಂತಹ ಶಿಕ್ಷಣ ಶ್ರೀರಾಮ ವಿದ್ಯಾಸಂಸ್ಥೆ ನೀಡುತ್ತದೆ. ಇಲ್ಲಿಕಲಿತ ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಬೆಳಗಬೇಕು ಎಂದು ಬಂಟ್ವಾಳ ಲೋಟರಿಕ್ಲಬ್‌ ಉಪಾಧ್ಯಕ್ಷರಾದ ಶ್ರೀ ಪಲ್ಲವಿಕಾರಂತ್‌ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆ ಅರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಹಾಗೂ ಆಶೀರ್ವಾದ ಪಡೆದರು. 10ನೇ ತರಗತಿ ವಿದ್ಯಾರ್ಥಿ ಪ್ರಮುಖರು, 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನಗೈದರು.
ಕಾರ್ಯಕ್ರಮವನ್ನು ಸಹಶಿಕ್ಷಕಿಯಾದ ವಿಜಯ ಸ್ವಾಗತಿಸಿ, ೧೦ನೇ ತರಗತಿಯ ಶಮಿತಾ, ಪ್ರದೀಪ್, ವೈಷ್ಣವಿ, ಭವ್ಯ,ಅರ್ಚನಾ ಅನಿಸಿಕೆ ವ್ಯಕ್ತಪಡಿಸಿದರು.೮ನೇ ತರಗತಿಯ ಪ್ರಕೃತಿ ಹಾಡಿದಳು.ಹಿರಿಯ ಶಿಕ್ಷಕಿ ಶಾಂಭವಿ ವಂದಿಸಿದರು. ಹತ್ತನೇತರಗತಿಯ ವಿದ್ಯಾರ್ಥಿಗಳಿಗೆ ಸಹಶಿಕ್ಷಕರಾದ ಮನೋಜ್‌ರವರುಅನುಗ್ರಹದ ಮಾತುಗಳನ್ನಾಡಿದರು. ೯ನೇ ತರಗತಿಯ ಅನಘಾ ಕಾರ್‍ಯಕ್ರಮ ನಿರೂಪಿಸಿದಳು.

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...