Tuesday, February 3, 2026

ನೆಟ್ಲ: ವಿಚಾರಗೋಷ್ಠಿ, ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಕಾರ್ಯಕ್ರಮ

ಕಲ್ಲಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ ಶಿವಪಾರ್ವತಿ ಜ್ಞಾನವಿಕಾಸ ಕೇಂದ್ರ ಗೋಲ್ತಮಜಲ್ ಬಿ ಇದರ ಸಹಯೋಗದಲ್ಲಿ ನೆಟ್ಲ ನಿಟಿಲೇಶ್ವರ ದೇವಸ್ಥಾನದ ವಠಾರದಲ್ಲಿ ಸರಕಾರಿ ಸೌಲಭ್ಯಗಳ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಆಯುಷ್ಮಾನ್  ಕಾರ್ಡ್ ನೋಂದಾವಣೆ ಮತ್ತು ವಿತರಣಾ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷರಾದ ಶಿವಪ್ಪಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಬಟ್ಯಪ್ಪ ಶೆಟ್ಟಿ ರವರು ನೆರವೇರಿಸಿ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲದ ಯೋಜನಾಧಿಕಾರಿ ಶ್ರೀ  ಪಿ ಚೆನ್ನಪ್ಪ ಗೌಡ  ಆಯುಷ್ಮನ್ ಕಾರ್ಡ್  ಉಪಯೋಗದ ಬಗ್ಗೆ ಹಾಗೂ ನೆಟ್ ವರ್ಕ್ ಆಸ್ಪತ್ರೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ಸಂಗೀತ ಶರ್ಮ ರವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಮೇಲ್ವಿಚಾರಕಿ ಸವಿತಾ ಕುಮಾರಿ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಭವ್ಯ ಸ್ವಾಗತಿಸಿ, ಹೇಮಲತಾ ಧನ್ಯವಾದವಿತ್ತರು ಸೇವಾ ಪ್ರತಿನಿಧಿ  ಮಾಲತಿ ಕಾರ್ಯಕ್ರಮ ನಿರೂಪಿಸಿದರು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...