Thursday, January 29, 2026

ಲ್ಯಾಪ್ ಕಳವು ಆರೋಪಿ ಬಂಧನ : ನಗರ ಠಾಣಾ ಪೋಲೀಸರಿಂದ ಕಾರ್ಯಚರಣೆ ಬಸ್ ನಿಂದ ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕಳವು ಮಾಡಿದ್ದ ಆರೋಪಿ.

ಬಂಟ್ವಾಳ: ಖಾಸಗಿ‌ ಬಸ್ ನ ಸೀಟಿನಲ್ಲಿರಿಸಿದ್ದ ಕಾಲೇಜು ವಿದ್ಯಾರ್ಥಿನೋರ್ವಳ ಲ್ಯಾಪ್ ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸರು

ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಬುಧವಾರ ನಡೆದಿದೆ.

ದಾವಣಗೆರೆ ಕೆ.ಟಿ.ಜಿ.ನಗರ ಡಾಂಗೆ ಕ್ರಾಸ್ ಪಾರ್ಕ್ ನಿವಾಸಿ ಮಂಜ ಯಾನೆ ಮಂಜುನಾಥ (45) ಬಂಧಿತ ಆರೋಪಿ.

ಬಂಧಿತ ಆರೋಪಿಯಿಂದ 50ಸಾವಿರ ಮೌಲ್ಯದ ಲ್ಯಾಪ್ ಟಾಪ್ ನ್ನು ವಶಕ್ಕೆ ಪಡೆಯಲಾಗಿದೆ.

 

 *ಘಟನೆಯ ವಿವರ* 

ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ನಿವಾಸಿ ಅನನ್ಯ ಅವರು ಎಸ್.ವಿ.ಎಸ್. ಕಾಲೇಜು ವಿದ್ಯಾರ್ಥಿ ನಿಯಾಗಿದ್ದು 8 ತಾರೀಖಿನಂದು ಕಾಲೇಜು ಮುಗಿಸಿ ಬಿಸಿರೋಡನಿಂದ ಖಾಸಗಿ ಬಸ್ ನಲ್ಲಿ ಮನೆಗೆ ಹೋಗುವ ಸಂದರ್ಭದಲ್ಲಿ ಬಸ್ ನಲ್ಲಿ ಲ್ಯಾಪ್ ಟಾಪ್ ನ್ನು ಇಟ್ಟು ಸೀಟು ಕಾಯ್ದಿರಿಸಿ ಬಸ್ ನಿಂದ ಇಳಿದು ಅಲ್ಲೇ ಇರುವ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಸೀಟ್ ನಲ್ಲಿದ್ದ ಲ್ಯಾಪ್ ಟಾಪ್ ಕಳವು ಆಗಿತ್ತು.

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ಲ್ಯಾಪ್ ಹಿಡಿದುಕೊಂಡು ಪುತ್ತೂರು, ವಿಟ್ಲ ಗುರುವಾಯನಕೆರೆ ಸುತ್ತಾಡಿ ಬಳಿಕ ಬಿಸಿರೋಡಿನಿಂದ ರೈಲು ಮುಖಾಂತರ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಪೋಲೀಸರು ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ನಿರ್ದೇಶನ ದಂತೆ ಅಪರಾಧ ಪತ್ತೆ ವಿಭಾಗದ ಎಸ್.ಐ.ಕಲೈಮಾರ್ ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಎ.ಎಸ್.ಐ.ಜಯರಾಮ್ ರೈ, ಕೃಷ್ಣ ಕುಲಾಲ್, ಉಸ್ಮಾನ್, ಶ್ರೀಕಾಂತ್ , ಮನೋಹರ , ಗೋಣಿಬಸಪ್ಪ, ವಿವೇಕ್, ಕುಮಾರ್ ಸಹಕರಿಸಿದ್ದಾರೆ.

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...