ಬಂಟ್ವಾಳ, ನ. ೧೪: ಮನೆ ಸಮೀಪದ ಗದ್ದೆಯಲ್ಲಿ ಕಟ್ಟಿ ಹಾಕಿದ್ದ ೨ದನಗಳನ್ನು ಕಳವು ಮಾಡಿರುವ ಕುರಿತು ಗುರುವಾರ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಸಜಿಪಮೂಡ ಗ್ರಾಮದ ಕಾರಾಜೆ ನಿವಾಸಿ ಲಿಂಗಪ್ಪ ಬಂಗೇರ ಎಂಬವರಿಗೆ ಸೇರಿದ ಎರಡು ದನಗಳು ಕಳವಾಗಿದೆ ಎಂದು ದೂರಲಾಗಿದೆ. ಕಾಲು ಬಾಯಿ ರೋಗದಿಂದ ಬಳಲುತ್ತಿದ್ದ ಎರಡು ದನಗಳನ್ನು ಮನೆ ಪಕ್ಕದ ಗದ್ದೆಯಲ್ಲಿ ಬುಧವಾರ ರಾತ್ರಿ ಕಟ್ಟಲಾಗಿತ್ತು. ಆದರೆ, ಬೆಳಿಗ್ಗೆ ಗದ್ದೆಯಲ್ಲಿ ಕಟ್ಟಿದ್ದ ಕಾಣೆಯಾಗಿರುವುದಾಗಿ ತುಂಗಪ್ಪ ಅವರು ಪೊಲಿಸ್ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
