ಬಂಟ್ವಾಳ : ಕಲಾಶ್ರಯ ದಾಸಕೋಡಿಯಲ್ಲಿ ಸಂಸ್ಕಾರ ಭಾರತಿ ವತಿಯಿಂದ ಸಾಪ್ತಾಹಿಕ ವೇದಪಾಠಶಾಲೆ ಪ್ರಾರಂಭ.


ಈ ಕಾರ್ಯಕ್ರಮ ವನ್ನು ವೇದಮೂರ್ತಿ ವೆಂಕಟೇಶ್ ಭಟ್ ಪೈರುಪುಣಿ ಉದ್ಘಾಟಿಸಿದರು.
ಪ್ರಧಾನ ಅಭ್ಯಾಗತರಾಗಿ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಮ ವೇದಪಾಠ ಶಾಲೆಯ ಪ್ರಾಚಾರ್ಯರಾದ ವೇ.ಮೂ.ಕೃಷ್ಣ ಕುಮಾರ್ ಭಟ್, ಸುಳ್ಯ ಭಾರದ್ವಾಜ ಆಶ್ರಮದ ಸಂಸ್ಕ್ರತ ವೇದಪಾಠ ಶಾಲೆಯ ಪ್ರಾಚಾರ್ಯರಾದ ವೆ.ಮೂ.ವೆಂಕಟೇಶ ಶಾಸ್ತ್ರಿ ವ್ಯವಸ್ಥಾಪಕ ಸಂಸ್ಕಾರ ಭಾರತಿ ಜಿಲ್ಲಾ ಸಂಯೋಜಕ ಕಶೆಕೋಡಿ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಸಾಪ್ತಾಹಿಕ ಪಾಠಶಾಲೆ ಯ ಅಧ್ಯಾಪಕ ರಾದ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರನ್ನು ಸುಧಾಸೂರ್ಯನಾರಾಯಣ ಭಟ್ ದಂಪತಿಗಳು ಸನ್ಮಾನಿಸಿದರು.
ಪ್ರತಿ ಗುರುವಾರ ನಡೆಯುವ ವೇದಪಾಠದಲ್ಲಿ ವಯೋಮಿತಿ ಇಲ್ಲದೆ ಅಧ್ಯಯನ ನಡೆಸಲು ಅವಕಾಶವಿದ್ದು ಭಾರತೀಯ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವಲ್ಲಿ ಸಮಾಜದ ಬಂಧುಗಳು ತಮ್ಮನ್ನು ತೊಡಗಿಸಿಕೊಳ್ಳಲು ಕಶೆಕೋಡಿಯವರು ಕರೆ ನೀಡಿದರು.