ಬಂಟ್ವಾಳ: ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬದರ್ಕಳ ಗರಡಿ ಕ್ಷೇತ್ರದಲ್ಲಿ ನೂತನ ಕೊಡಿಮರದ ತೈಲಾಧಿವಾಸ ಕಾರ್ಯಕ್ರಮ ಮಾ.29ರಂದು ನಡೆಯಲಿದೆ.
ನೂತನ ಕೊಡಿಮರಕ್ಕೆ ಎಳ್ಳೆಣ್ಣೆ ಹಾಕಲು ಬಯಸುವ ಭಕ್ತಾಧಿಗಳು ಎಳ್ಳೆಣ್ಣೆಯ ಹಣವನ್ನು ನೀಡಿ ಕ್ಷೇತ್ರದಿಂದ ಎಣ್ಣೆ ಪಡೆದುಕೊಳ್ಳಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.
