ಬಂಟ್ವಾಳ, ಜೂ. ೭: ಸ್ನೇಹಿತರ ನಡುವೆ ಹೊಡೆದಾಟ ನಡೆದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ.ರೋಡ್ ಕೈಕಂಬದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಇಲ್ಲಿನ ಕೈಕಂಬ ನಿವಾಸಿಗಳಾದ ಫೈಝಲ್, ರಿಯಾಝ್, ಹಬೀಬ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿ ಸ್ನೇಹಿತರ ನಡುವೆ ಕತ್ತಿ ಕಾಳಗ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೈಜಲ್ ಸ್ನೇಹಿತ ರಿಯಾಜ್ ಬಳಿ ಬಂದು ಹಬೀಬ್ ಎಲ್ಲಿ ಎಂದು ಕೇಳಿದ್ದಾನೆ. ರಿಯಾಜ್ ಗೊತ್ತಿಲ್ಲ ಎಂದು ಹೇಳಿದಾಗ ಕತ್ತಿಯಿಂದ ಇವನಿಗೆ ಮತ್ತು ಜೊತೆಯಲ್ಲಿದ್ದ ಹಬೀಬ್ ಗೂ ಕಡಿದಿರುವುದಾಗಿ ಸ್ಥಳೀಯರು ತಿಳಿಸಿದ್ದ ಬಳಿಕ ಇವರಿಬ್ಬರೂ ಸೇರಿ ಪೈಜಲ್ ಗೆ ಹಲ್ಲೆ ನಡೆಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಭಾರೀ ಸಂಖ್ಯೆಯ ಸ್ಥಳೀಯರು ಹಾಗೂ ಕುತೂಹಲಿಗರು ನೆರೆದಿದ್ದು, ಪೊಲೀಸರು ಲಘು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕೈಂಕಬದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್ಸೈ ಚಂದ್ರ ಶೇಖರ್ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.