ಬಂಟ್ವಾಳ: ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಬಂಗೇರ ಕಜೆಕಾರು ಇವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಪುಂಜಾಲಕಟ್ಟೆ TO ಕಟ್ಟದ ಪಡ್ಪು ರಸ್ತೆಯ, ಶ್ರೀ ಗೀತಾ ಭಜನಾ ಮಂಡಳಿ ಕಿಜನಾರು ನರ್ಸಿಕುಮೇರು ನಿಂದ ಕೆದಿಮೇಲು ಅಂಗನವಾಡಿ ಕೇಂದ್ರದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡ-ಮರಗಳು ಹಾಗೂ ರಸ್ತೆ ತಿರುವುಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಗಿಡಗಳನ್ನು ಕಡಿದು , ವಾಹನ ಸಂಚಾರಕ್ಕೆ ಸುಗಮಗೋಳಿಸಲಾಯಿತು.

ನಿರಂತರ ಮಳೆ ಹಾಗೂ ಗಾಳಿಯಿಂದ ಜನರು ಎದುರಿಸುತ್ತಿರುವ ವಿದ್ಯುತ್ ಕಡಿತದ ಸಮಸ್ಯೆಯನ್ನು ನಿವಾರಿಸಲು ಮೆಸ್ಕಾಂ-ಕಕ್ಕೆಪದವು ವಿಭಾಗದ ಪವರ್ ಮ್ಯಾನ್ ಗಳ ಸಹಕಾರದೊಂದಿಗೆ ವಿದ್ಯುತ್ ತಂತಿಗಳಿಗೆ ತಾಗುವ ಮರಗಳು, ಹಾಗೂ ವಿದ್ಯುತ್ ಪ್ರವಾಹಕಗಳಿಗೆ ಸುತ್ತಿಕೊಂಡಿದ್ದ ಬಳ್ಳಿಗಳನ್ನು ಕಡಿಯಲಾಯಿತು.
ನಂತರ ಬಡಗಕಜೆಕಾರು ಗ್ರಾಮ ಪಂಚಾಯತ್ ಗೆ ಒಳಪಟ್ಟ ಮಾಡಪಲ್ಕೆ “ಸಾರ್ವಜನಿಕ ಬಸ್ ತಂಗುದಾನ” ದ ಸ್ವಚ್ಛತೆ” ಮಾಡಲಾಯಿತು
ಈ ಸಂದರ್ಭದಲ್ಲಿ ಭಾ.ಜ.ಪಾ. ಸರಪಾಡಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಭು ಮಾಡ, ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ಅಬುರ , ಮಾಜಿ ಸದಸ್ಯರಾದ ಪ್ರವೀಣ್ ಗೌಡ , ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.
