Thursday, February 13, 2025

ಕಜೆಕಾರು ಮೂಲ್ಯರ ಯಾನೆ ಕುಲಾಲ ಕುಂಬಾರರ ಸೇವಾ ಸಂಘ ವಾರ್ಷಿಕೋತ್ಸವ

ಬಂಟ್ವಾಳ : ಒಂದು ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಸಮುದಾಯದ ಚಿಂತನೆ ಮಾಡಬೇಕು. ಒಗ್ಗಟ್ಟಿನಿಂದ ಮುನ್ನಡೆದಾಗ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಬಹುದು ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಕಜೆಕಾರು ಮೂಲ್ಯರ ಯಾನೆ ಕುಲಾಲ ಕುಂಬಾರರ ಸೇವಾ ಸಂಘದ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಒಂದೇ ಸಮುದಾಯದವರೊಳಗೆ ಭಿನ್ನಾಭಿಪ್ರಾಯ ಬೇಡ, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದನೆ ಮಾಡಿಕೊಳ್ಳುವ ಮಾನಸಿಕ ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಜೆಕಾರಿನಲ್ಲಿ ಕಾರ್ಯಕ್ರಮ ನಡೆಸಿದಂತೆ ಇತರ ಹಳ್ಳಿಗಳಲ್ಲಿ ನಡೆದಾಗ ಕುಲಾಲರ ಸಂಘಟನೆ ರಾಜ್ಯಾದ್ಯಂತ ಗಟ್ಟಿಗೊಳ್ಳಲು ಸಾಧ್ಯ ಎಂದ ಅವರು , ಯುವಕರು ದಾರಿ ತಪ್ಪದಂತೆ ಧಾರ್ಮಿಕ ಶ್ರದ್ಧೆ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ನಾವು ಕುಟುಂಬ, ಜಾತಿ, ಗ್ರಾಮದವರು ಸೇರಿ ನಮ್ಮ ಆಚಾರ ವಿಚಾರ ಸಂಪ್ರದಾಯ ಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಮಾಡಿದಾಗ ಸಂಘ,
ಸಂಘಟನೆಗಳು ಬೆಳೆಯುತ್ತದೆ ಎಂದು ಹೇಳಿದರು.
ಮಂಗಳೂರು ಉದ್ಯಮಿ ಅನಿಲ್ ದಾಸ್ ಅವರು ಮಾತನಾಡಿ, ಹೇಳಿದರು. ಯುವಕರನ್ನು ರಾಜಕೀಯ ಪ್ರೇರಿತವಾಗಿ ಬಳಸಲಾಗುತ್ತದೆಯೇ ಹೊರತು, ಸಮುದಾಯಗಳ ಅಭಿವೃದ್ಧಿಗೆ ಅವರನ್ನು ಸದೃಢರಾಗಿಸುವ ಪ್ರಯತ್ನ ನಡೆಯುತ್ತಿಲ್ಲ. ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಕುಲಾಲ ಕುಂಬಾರ ಯಾನೆ ಮೂಲ್ಯರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಡಿ.ಎಂ. ಕುಲಾಲ್, ಉದ್ಯಮಿಗಳಾದ ಗಿರೀಶ್, ಯಶೋಧರ ಬಂಗೇರ, ಗಣೇಶ್ ಮೂಲ್ಯ ಅನಿಲಡೆ, ಮಚ್ಛೇಂದ್ರ ಕುಲಾಲ್ ಬಂಟ್ವಾಳ, ಮಾಡಪಲ್ಕೆ ಶಾಲೆಯ ಶಿಕ್ಷಕ ಹರೀಶ್ ಕಾರ್ಕಳ, ಹಾಗೂ ಸಂಘದ ಪದಾಽಕಾರಿಗಳಾದ ಯಶೋಧರ ಸಾಲ್ಯಾನ್ ಪಟೀಲು, ಸದಾನಂದ ಕುಲಾಲ್ ಭ್ರಮರಿ ಮಿತ್ತೋಟು, ಪೂವಪ್ಪ ಮೂಲ್ಯ ಮಾಡಪಲ್ಕೆ, ಶ್ರೀಧರ ಕೇದಿಮೇಲು, ಡೀಕಯ್ಯ ದೆಲ್ಯಾಂತ ಬಲು, ಪತ್ರಕರ್ತ ರಂಜಿತ್ ಮಡಂತ್ಯಾರು, ಅಶೋಕ್ ಪಟೀಲು, ವಿಠಲ ಮೂಲ್ಯ ನರ್ಸಿಕುಮೇರು, ವಾಸು ಮೂಲ್ಯ ಕೊಡೆಂಚ್ಚಡ್ಕ, ಶಿವಪ್ಪ ಮೂಲ್ಯ ಅಬುರ ಅವರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ.ದುಗ್ಗಪ್ಪ ಕಜೆಕ್ಕಾರು ಅವರು ಸ್ವಾಗತಿಸಿದರು, ವಿಠಲ ಅಬುರ ವಂದಿಸಿದರು. ಹರೀಶ್ ಕುಲಾಲ್ ನಿರಾರಿ ಅವರು ನಿರೂಪಿಸಿದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...