ವಿಟ್ಲ: ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಗೊಂಡ ೫ ಲಕ್ಷ ರೂ. ಅನುದಾನದಲ್ಲಿ ವಿಟ್ಲ ಕಸಬಾ ಗ್ರಾಮದ ಕೈಂತಿಲ ರಸ್ತೆಗೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನಡೆಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಸದಸ್ಯರಾದ ಇಂದಿರಾ ಅಡ್ಯಾಳಿ, ರಾಮ್‌ದಾಸ್ ಶೆಣೈ, ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ, ಲೋಕನಾಥ ಶೆಟ್ಟಿ, ಕೆ.ಎಸ್ ಸಂಕಪ್ಪ ಗೌಡ ಕೈಂತಿಲ, ವೀರಪ್ಪ ರಾಯರಬೆಟ್ಟು, ಮೋನಪ್ಪ ರಾಯರಬೆಟ್ಟು, ದಿನೇಶ್ ಮಾಮೇಶ್ವರ, ಕೇಶವ ಪಂಜುರ್ಲಿಕೋಡಿ, ಹರೀಶ್ ಆಚಾರ್ಯ, ಸಂತೋಷ್ ಆಚಾರ್‍ಯ, ಕಾರ್ತಿಕ್ ಕೈಂತಿಲ ಎಂಜಿನಿಯರ್ ನಾಗೇಶ್, ಗುತ್ತಿಗೆದಾರ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
